ಬೆಂಗಳೂರು: ತುಂಗಾಭದ್ರ ನದಿ ದಡದ ಮೇಲೆ ವಿದೇಶಿ ಮಹಿಳೆ ಜೊತೆಗೆ ಇಬ್ಬರು ಮಹಿಳೆಯರ ಮೇಲಿನ ಅತ್ಯಾಚಾರ ದೇಶಕ್ಕೆ ದೊಡ್ಡ ಕಳಂಕ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಇದೊಂದು ಹೀನ ಕೃತ್ಯ. ಇತ್ತೀಚಿನ ದಿನಗಳಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿದ್ದಾವೆ. ಇಂತಹ ಕಿಡಿಗೇಡಿಗಳು ಇರುತ್ತಾರೆ. ಎಚ್ಚರಿಕೆಯಿಂದ ಸುರಕ್ಷಿತ ಸ್ಥಳಕ್ಕೆ ಹೋಗಬೇಕು ಎಂದು ತಿಳಿಸಿದರು.
ನಟಿ ರನ್ಯಾರಾವ್‌ಗೆ ಭೂಮಿ ಮಂಜೂರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ ಪಾಟೀಲ್, ಬಿಜೆಪಿ ಸರ್ಕಾರದ ಅವಧಿಯಲ್ಲಿ 12 ಎಕರೆ ಭೂಮಿ ಟಿಎಂಟಿ ಕಂಪನಿಯ ಹೆಸರಿಗೆ ಮಂಜೂರು ಆಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕಿಲ್ಲ. ಸಿಕ್ಕ ನಂತರ ಮಾತನಾಡುತ್ತೇನೆ ಎಂದರು.





