Mysore
14
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ರನ್ಯಾ ಕೇಸ್‌ | ನಟಿ ಕಂಪನಿಗೆ ಕೆಐಎಡಿಬಿ ಜಮೀನು ನೋಂದಣಿಯಾಗಿಲ್ಲ ; ಶಾಸಕ ಸ್ಪಷ್ಟನೆ

ಬೆಂಗಳೂರು :  ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನವಾಗಿರುವ ಚಿತ್ರನಟಿ ರನ್ಯಾರಾವ್ ಅವರ ಕಂಪನಿಗೆ
ಕೆಐಎಡಿಬಿ ಜಮೀನು ನೋಂದಣಿ ಆಗಿಲ್ಲ ಎಂದು ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ ಸ್ಪಷ್ಟನೆ ನೀಡಿದರು.

ವಿಧಾನಸೌಧದ ಮೊಗಸಾಲೆಯಲ್ಲಿ ಟಿ.ವಿ ಮಾಧ್ಯಮದವರಿಗೆ ಟಿ ಬಿ ಜಯಚಂದ್ರ ಅವರು ಮಾತನಾಡಿದರು.

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರ ನಟಿ ರನ್ಯಾರಾವ್ ಅವರು ನಿರ್ದೇಶಕಿ ಆಗಿರುವ ಕ್ವಿರೋಡ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ತುಮಕೂರು ಜಿಲ್ಲೆಯ ಸಿರಾದಲ್ಲಿ ಕೆಐಎಡಿಬಿ ವತಿಯಿಂದ 2023ರಲ್ಲಿ 12 ಎಕರೆ ಜಮೀನನ್ನು ಮಂಜೂರು ಮಾಡಲಾಗಿತ್ತು. ಆದರೆ ರನ್ಯಾ ರಾವ್ ಅವರು ಕೆಐಎಡಿಬಿ ಜಮೀನಿನ ಖರೀದಿಗೆ ಹಣ ಪಾವತಿ ಮಾಡಿರಲಿಲ್ಲ. ಹೀಗಾಗಿ ಅವರ ಕಂಪನಿಗೆ ಕೆಐಎಡಿಬಿ ಜಮೀನನ್ನು ನೀಡಿಲ್ಲ ಎಂದು ಟಿ‌ಬಿ ಜಯಚಂದ್ರ ಅವರು ಸ್ಪಷ್ಟಪಡಿಸಿದ್ದಾರೆ .

2023 ಜನವರಿಯಲ್ಲಿ 12 ಎಕರೆ ಜಮೀನನ್ನು ರನ್ಯಾ ರಾವ್ ಅವರ ಕಂಪನಿಗೆ ಮಂಜೂರು ಮಾಡಲಾಗಿತ್ತು.
2023 ಮೇ ತಿಂಗಳಲ್ಲಿ ತಾವು ಶಾಸಕರಾದ ನಂತರ ಸ್ಥಳೀಯರಿಗೆ ಕೆಐಎಡಿಬಿ ಜಮೀನು ನೀಡಬೇಕೆಂದು ನಿರ್ಧಾರ ಕೈಗೊಂಡಿರುವುದರಿಂದ ಟಿ.ಬಿ ಜಯಚಂದ್ರ ಅವರು ಇದೇ ವೇಳೆ ತಿಳಿಸಿದ್ದಾರೆ‌.

Tags:
error: Content is protected !!