Mysore
18
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ರಂಜಾನ್‌ ಹಬ್ಬ: ಮುಸ್ಲಿಂ ಭಾಂಧವರಿಗೆ ಶುಭಾಶಯ ತಿಳಿಸಿದ ಖಂಡ್ರೆ

ಬೀದರ್: ಮುಸ್ಲಿಂರ ಪವಿತ್ರ ಹಬ್ಬವಾದ ಈದ್‌ ಉಲ್‌ ಫಿತರ್‌ (ರಂಜಾನ್‌) ಹಬ್ಬದ ದಿನದಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಮುಸ್ಲಿಂ ಬಾಂಧವರಿಗೆ ಶುಭಾಶಯ ತಿಳಿಸಿದ್ದಾರೆ.

ಇಂದು ನಗರದ ಭಾಲ್ಕಿಯ ಈದ್ಗಾ ಮೈದಾನಕ್ಕೆ ಭೇಟಿ ನೀಡಿದ ಸಚಿವ ಈಶ್ವರ್‌ ಖಂಡ್ರೆ ಅವರು, ಈ ಪವಿತ್ರ ಹಬ್ಬ ಎಲ್ಲರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಯ ಬೆಳಕು ಹೊತ್ತೊಯ್ಯಲಿ ಎಂದು ಶುಭ ಹಾರೈಸಿದರು.

ಈ ಹಬ್ಬದ ದಿನದಂದು ಸೌಹಾರ್ದ, ಸಹೋದರತ್ವ, ಶಾಂತಿ ಮತ್ತು ಸಹಬಾಳ್ವೆಯ ಮಹತ್ವವನ್ನು ವಿವರಿಸಿ. ಹಿಂದೂ-ಮುಸ್ಲಿಂ-ಸಿಖ್‌-ಇಸಾಯಿ ಬಾಂಧವರ ನಡುವೆ ಭಾವೈಕ್ಯತೆ ಮತ್ತು ಶ್ರೇಷ್ಠವಾದ ಸಹೋದರತ್ವ ಬೆಳೆಸುವ ಸಂದೇಶವನ್ನು ನೀಡಿ ಎಂದು ಮುಸ್ಲಿಂ ಸಹೋದರರಿಗೆ ತಿಳಿಸಿದರು.

 

Tags:
error: Content is protected !!