Mysore
29
overcast clouds

Social Media

ಮಂಗಳವಾರ, 10 ಫೆಬ್ರವರಿ 2026
Light
Dark

ಹೈಕಮಾಂಡ್ ವಿರುದ್ಧ ಮತ್ತೆ ಸಿಡಿದೆದ್ದ ಸಂಸದ ರಮೇಶ್ ಜಿಗಜಿಣಗಿ

ವಿಜಯಪುರ : ಬಿಜೆಪಿ ಸೇರಬೇಡಿ ಎಂದು ಬಹಳ ಜನ ದಲಿತರು ವಾದ ಮಾಡಿದ್ದರೂ ಕೂಡ ಬೆಂಬಲ ಕೊಟ್ಟಿದ್ದಾರೆ. ಆದರೆ ದಲಿತನಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿಯಿಂದ ಏಳು ಚುನಾವಣೆಯಲ್ಲಿ ಗೆದ್ದು ಬಂದ ಏಕೈಕ ಸಂಸದನಾದರೂ ಕೂಡ ಸಚಿವ ಸ್ಥಾನಕ್ಕೆ ನನ್ನನ್ನ ಪರಿಗಣಿಸಿಲ್ಲ ಎಂದು ಹೈಕಮಾಂಡ್‌ ವಿರುದ್ಧ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅಸಮಾಧನ ವ್ಯಕ್ತಪಡಿಸಿದರು.

ಕಳೆದ ವಾರವೂ ಕೂಡ ಹೈಕಮಾಂಡ್‌ ವಿರುದ್ಧ ಹಾಗೂ ರಾಜ್ಯ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಇಂದು ಕೂಡ ನಗರದಲ್ಲಿ ಸಂಸದರ ಕಚೇರಿ ಉದ್ಘಾಟನೆ ಮಾಡಿ ಮಾತನಾಡಿದ ಅವರು, ನನಗೆ ಮಂತ್ರಿಸ್ಥಾನ ನೀಡುವ ಅವಶ್ಯಕತೆ ಇಲ್ಲ. ಅವಶ್ಯಕತೆ ಇರುವುದು ಜನರದ್ದು. ನಾಣು ದೆಹಲಿಯಿಂದ ವಿಜಯಪುರಕ್ಕೆ ಮರಳಿದಾಗ ಜನ ನನಗೆ ಥೂ ಎಂದು ಬೈದಿದ್ದರು.  ನಾವು ಮೊದಲೆ ಹೇಳಿದ್ದೇವು. ಈ ಪಕ್ಷ ದಲಿತರ ವಿರೋಧಿ, ಬಿಜೆಪಿ ಪಕ್ಷ ಸೇರಬೇಡಿ ಎಂದು ಬಹಳ ಜನ ದಲಿತರು ವಾದ ಮಾಡಿದ್ದರು. ನನಗೋಸ್ಕರ ಅಲ್ಲದಿದ್ದರೂ ಜನರ ಒತ್ತಡವಂತೂ ಇದೆ. ಇದು ಎಂತಹ ನ್ಯಾಯ ನೀವೇ ಹೇಳಿ. ಎಲ್ಲಾ ಮೇಲ್ಜಾತಿಯವರು  ಸಚಿವರಾಗಿದ್ದಾರೆ ದಲಿತರೇನು ಬಿಜೆಪಿಗೆ ಬೆಂಬಲ ನೀಡಿಲ್ಲವೇ ಎಂದು ಪೃಶ್ನೆ ಮಾಡಿದರು. ಅಲ್ಲದೆ ಈ ವಿಚಾರದಿಂದ ನನಗೆ ಬಹಳ ನೋವಾಗಿದೆ ಎಂದು ಬೇಸರ ಹೊರಹಾಕಿದರು.

Tags:
error: Content is protected !!