Mysore
27
clear sky

Social Media

ಶನಿವಾರ, 03 ಜನವರಿ 2026
Light
Dark

ರಮೇಶ್‌ ಜಾರಕಿಹೊಳಿ ಪರಿಸ್ಥಿತಿ ತಿಂದು ಎಸೆವ ಬಾಳೆ ಎಳೆ ಎಲೆಯಂತಾಗಿದೆ: ರಾಜ್ಯ ಕಾಂಗ್ರೆಸ್‌ ಟ್ವೀಟ್‌

ಬೆಂಗಳೂರು: ರಮೇಶ್‌ ಜಾರಕಿಹೊಳಿ ಪರಿಸ್ಥಿತಿ ತಿಂದು ಎಸೆವ ಬಾಳೆ ಎಲೆಯಂತಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಟ್ವೀಟ್ ಮಾಡಿದೆ.

ಆಪರೇಷನ್‌ ಕಮಲಕ್ಕೆ ಬಲಿಯಾದ ರಮೇಶ್‌ ಜಾರಕಿಹೊಳಿ ಪರಿಸ್ಥಿತಿಯು ಈಗ ತಿಂದು ಎಸೆವ ಬಾಳೆ ಎಲೆಯಂತಾಗಿದೆ. ಅವರು ಯಾಕಾದರೂ ಬಿಜೆಪಿಗೆ ಹೋದೆ ಎಂದು ಬೇಸರದಲ್ಲಿದ್ದಾರೆ ಎಂದು ಲೇವಡಿ ಮಾಡಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಪಕ್ಷ ಹತ್ತಿದ ಏಣಿಯನ್ನು ಒದೆಯುವುದು ಬಿಜೆಪಿಯ ಹಳೇ ಚಾಳಿ ಎಂದು ಅಣಕಿಸಿದೆ.

ಸ್ವಂತ ಶಕ್ತಿಯಿಂದ ಅಧಿಕಾರ ಹಿಡಿಯಲು ಸಾಧ್ಯವಾಗದೇ, 2019ರಲ್ಲಿ ಅನೈತಿಕ ಆಪರೇಷನ್‌ ಕಮಲದ ಹೆಸರಿನಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆಸಿ ಸಮ್ಮಿಶ್ರ ಸರ್ಕಾರದ 17 ಶಾಸಕರನ್ನು ಸೆಳೆದು ಅಧಿಕಾರ ಅನುಭವಿಸಿದ ಬಿಜೆಪಿ ಇಂದು ಅದೇ ಶಾಸಕರನ್ನು ಕಾಲಕಸದಂತೆ ಕಾಣುತ್ತಿದೆ ಎಂದು ಟೀಕೆ ಮಾಡಿದೆ.

 

Tags:
error: Content is protected !!