ಚನ್ನಪಟ್ಟಣ : ಇತ್ತೀಚೆಗೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಳಿಕ ನಂದಿನಿ ಹಾಲಿನ ದರವು ಸಹ ಏರಿಕೆಯಾಗಿದೆ. ಹೀಗಾಗಿ ಪ್ರಯಾಣಿಕರ ದರವನ್ನು ಸಹ ಏರಿಕೆ ಮಾಡಿ ಎಂದು ಸಾರಿಗೆ ಸಚಿವರಿಗೆ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳು ಮನವಿ ಮಾಡಿದ್ದರು. ಈ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಅವರು ಹೇಳಿದಂತೆ ದರ ಹೆಚ್ಚಿಸಲ್ಲ, ಆದರೆ ಈ ಬಗ್ಗೆ ಒಂದು ನಿರ್ಣಯ ಮಾಡುತ್ತಾರೆ ಎಂದು ಹೇಳಿದರು.
ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ೩ ರೂ. ಹೆಚ್ಚಳ ಮಾಡಿದ್ದು ನಿಜ. ಏಕೆಂದರೆ ಸರ್ಕಾರಿ ಕೆಲಸಗಳು ನಡೆಯಬೇಕು. ಸರ್ಕಾರಿ ನೌಕರರಿಗೆ ಸಂಬಳ ನೀಡಬೇಕು ಅಂದರೆ ತೆರಿಗೆ ಅನಿವಾರ್ಯ. ಆದರೆ ಕೇಂದ್ರ ಸರ್ಕಾರದಂತೆ ತೈಲ, ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಿಸಿಲ್ಲ. ಕೇಂದ್ರ 400 ರೂ. ಗ್ಯಾಸ್ನ್ನು ೧ ಸಾವಿರ ರೂ. ಮಾಡಿದೆ ಎಂದು ಕಿಡಿಕಾರಿದರು.