Mysore
36
clear sky

Social Media

ಮಂಗಳವಾರ, 07 ಏಪ್ರಿಲ 2026
Light
Dark

ಪಿಯೂಷ್‌ ಗೋಯಲ್‌ ಅವರ ಹೇಳಿಕೆಯೇ ಸಣ್ಣತನ: ರಾಮಲಿಂಗ ರೆಡ್ಡಿ

ಬೆಂಗಳೂರು: ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಅವರು, ರಾಜ್ಯಗಳು ಅಧಿಕ ತೆರಿಗೆ ಕೇಳೋದು ಸಣ್ಣತನವೆಂದು ನೀಡಿರುವ ಹೇಳಿಕೆಯೇ ಸಣ್ಣತನವಾಗಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಇಂದು(ಫೆಬ್ರವರಿ.10) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಪಿಯೂಷ್‌ ಅವರಿಗೆ ಸಾಮಾನ್ಯ ಜ್ಞಾನವಿಲ್ಲದೇ ಇರುವುದರಿಂದ ಹಾಗೇ ಹೇಳಿಕೆಗಳನ್ನು ನೀಡಿದ್ದಾರೆ. ನಮ್ಮ ರಾಜ್ಯದಿಂದ ಸುಮಾರು 4.5 ಲಕ್ಷ ಕೋಟಿ ಜಿಎಸ್‌ಟಿ ಮೂಲಕ ಕೇಂದ್ರಕ್ಕೆ ಹೋಗುತ್ತದೆ. ಹೀಗಾಗಿ ನಮ್ಮ ಹಕ್ಕನ್ನು ನಾವು ಕೇಳುವುದರಲ್ಲಿ ತಪ್ಪೇನಿದೆ ಎಂದು ವಾಗ್ದಾಳಿ ನಡೆಸಿದರು.

ಇನ್ನೂ ಕೇಂದ್ರದಿಂದ ನಮಗೆ 1 ರೂಪಾಯಿಗೆ 12 ಪೈಸೆ ಮಾತ್ರ ಸಿಗುತ್ತಿದೆ. ನಮ್ಮ ರಾಜ್ಯದಿಂದ ಅಷ್ಟು ತೆರಿಗೆ ಕಟ್ಟಿದರು ಅವರು ನಮ್ಮ ರಾಜ್ಯದ ಅಭಿವೃದ್ಧಿಗೆ ಸರಿಯಾದ ಹಣವನ್ನು ಬಿಡುಗಡೆ ಮಾಡುವುದಿಲ್ಲ. ಹಾಗಾಗಿ ರಾಜ್ಯ ತೆರಿಗೆಯ ಬಗ್ಗೆ ಕೇಳೋದು ಸರಿಯಲ್ಲ ಎನ್ನುವುದು ಸರಿಯಲ್ಲ ಎಂದು ಹೇಳಿದರು.

ರಾಜ್ಯಗಳು ತೆರಿಗೆ ಕಟ್ಟುವಾಗ ಕೇಂದ್ರದಿಂದ ಅಧಿಕ ಪಾಲು ನೀಡಿ ಎಂದು ಕೇಳೋದು ತಪ್ಪಲ್ಲ. ಪಿಯೂಷ್‌ ಅವರು ಕರ್ನಾಟಕದವರು ಆಗಿದ್ದರೆ ಏನು ಮಾಡುತ್ತಿದ್ದರು? ಆಗ ಅವರು ಇದೇ ರೀತಿ ಹೇಳುತ್ತಿದ್ದರಾ? ಹಾಗದರೆ ನಾವು ಕೇಂದ್ರಕ್ಕೆ ಅಧಿಕ ತೆರಿಗೆ ಪಾವತಿಸುವುದು ತಪ್ಪಾ ಎಂದು ಪ್ರಶ್ನಿಸಿದರು.

Tags:
error: Content is protected !!