Mysore
27
broken clouds

Social Media

ಗುರುವಾರ, 08 ಜನವರಿ 2026
Light
Dark

ರಾಮಲೀಲಾ ನಾಟಕ: ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು

ನವದೆಹಲಿ: ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ದೆಹಲಿಯ ಶಹಾದಾರ ಪ್ರದೇಶದ ವಿಶ್ವಕರ್ಮ ನಗರದ ರಾಮಲೀಲಾ ಮೈದಾನದಲ್ಲಿ ನಡೆದಿದೆ.

ವೃತ್ತಿಯಲ್ಲಿ ಪ್ರಾಪರ್ಟಿ ಡೀಲರ್ ಆಗಿದ್ದ 45 ವರ್ಷದ ಸುಶೀಲ್ ಕೌಶಿಕ್ ಮೃತಪಟ್ಟಿರುವ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಕೂಡ ವೈರಲ್ ಆಗಿದ್ದು, ಕೌಶಿಕ್ ಅವರು ಹುಷಾರಿಲ್ಲದ ನಂತರ ತೆರೆಮರೆಯಲ್ಲಿ ಹೋಗಿದ್ದಾರೆ ಎಂದು ತೋರಿಸುತ್ತದೆ.

ಈ ಕುರಿತು ಆಮ್ ಆದಿ ಪಕ್ಷದ (ಎಎಪಿ) ನಾಯಕ ಸೌರಭ್ ಭಾರದ್ವಾಜ್ ಅವರು ತಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದು, ಕರೋನಾ ಲಸಿಕೆ ನಂತರ, ಭಾರತದಲ್ಲಿ ಯುವಜನರು ನಡೆಯುವಾಗ ಹೃದಯಾಘಾತದಿಂದ ಸಾಯುತ್ತಿರುವ ಪ್ರಕರಣಗಳು ನಿರಂತರವಾಗಿ ಮುನ್ನೆಲೆಗೆ ಬರುತ್ತಿವೆ ಎಂದು ವಿಷಾಧಿಸಿದ್ದಾರೆ.

Tags:
error: Content is protected !!