ಅಯೋಧ್ಯ: ರಾಮ ಮಂದಿರ ವಿವಾದವನ್ನು ಬಿಜೆಪಿ ಅಂತ್ಯಗೊಳಿಸಿದೆ ಎಂದು ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ಪ್ರಕರಣದ ಪ್ರಮುಖ ದಾವೆದಾರರಾದ ಇಕ್ಬಾಲ್ ಅನ್ಸಾರಿ ಅವರು ಹೇಳಿದ್ದಾರೆ.
ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಣ್ಣ ವಿವಾದಗಳಿಗೆ ಜಗಳವಾಡುವುದನ್ನು ಬಿಟ್ಟುಬಿಡಿ ಎಂಬುದಾಗಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಸಲಹೆಯನ್ನು ಎಲ್ಲರೂ ಆಲಿಸಬೇಕು ಎಂದು ತಿಳಿಸಿದರು.
ರಾಮ್ ಲಲ್ಲಾ ಅವರ ಪಟ್ಟಾಭಿಷೇಕ ಸಮಾರಂಭದಲ್ಲಿ ತಾವು ಭಾಗವಹಿಸಿದ್ದು ಒಂದು ಅತ್ಯುತ್ತಮ ಅನುಭವವಾಗಿದೆ ಎಂದು ಅನ್ಸಾರಿ ತಿಳಿಸಿದರು.