ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಕರ್ನಾಟಕರಿಂದ ನಾರಾಯಣ ಕೃಷ್ಣಸಾ ಭಾಂಡಗೆ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.
ನಾರಾಯಣ ಕೃಷ್ಣಸಾ ಭಾಂಡಗೆ ಬಾಗಲಕೋಟೆಯ ಆರ್.ಎಸ್.ಎಸ್. ಕಾರ್ಯಕರ್ತರಾಗಿದ್ದಾರೆ. ರಾಮ ಮಂದಿರ ಹೋರಾಟ, ಕಾಶ್ಮೀರ ತಿರಂಗ ಹೋರಾಟ ಸೇರಿ ಬಿಜೆಪಿಯ ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. 8-10 ಬಾರಿ ಜೈಲಿಗೆ ಹೋಗಿ ಬಂದಿದ್ದ ಅವರು 2010 ರಿಂದ 16 ರವರೆಗೆ ವಿಧಾನಪರಿಷತ್ ಸದಸ್ಯರಾಗಿದ್ದರು.
ಜೊತೆಗೆ ಬಿಹಾರದಲ್ಲಿ ಡಾ.ಧರ್ಮಶೀಲಾ ಗುಪ್ತಾ ಹಾಗೂ ಡಾ.ಭೀಮಸಿಂಗ್ ಸೇರಿ ಇಬ್ಬರಿಗೆ ರಾಜ್ಯಸಭೆ ಟಿಕೆಟ್ ನೀಡಲಾಗಿದ್ದು, ಇನ್ನುಳಿದಂತೆ ಛತ್ತೀಸ್ಗಢದಲ್ಲಿ ರಾಜಾ ದೇವೇಂದ್ರಪ್ರತಾಪ್ ಸಿಂಗ್, ಹರಿಯಾಣದಲ್ಲಿ ಸುಭಾಷ್ ಬಾರ್ಲಾಗೆ ಹಾಗೂ ಉತ್ತರ ಪ್ರದೇಶದಲ್ಲಿ ಆರ್.ಪಿ.ಎನ್ ಸಿಂಗ್ಗೆ ಟಿಕೆಟ್ ನೀಡಲಾಗಿದೆ.
1.ಧರ್ಮಶೀಲಾ ಗುಪ್ತಾ: ಬಿಹಾರ
2.ಡಾ.ಭೀಮ್ ಸಿಂಗ್: ಬಿಹಾರ
3.ರಾಜಾ ದೇವೇಂದ್ರ ಪ್ರತಾಪ್ ಸಿಂಗ್: ಛತ್ತೀಸಗಢ್
4.ಸುಭಾಷ್ ಬರಲಾ: ಹರಿಯಾಣ
5.ನಾರಾಯಾಣ ಭಾಂಡಗೆ: ಕರ್ನಾಟಕ
6.ಆರ್ಪಿಎನ್ ಸಿಂಗ್: ಉತ್ತರ ಪ್ರದೇಶ
7.ಸುಭಾಂಶು ತ್ರಿವೇದಿ: ಉತ್ತರ ಪ್ರದೇಶ
8.ಚೌಧರಿ ತೇಜ್ವೀರ್ ಸಿಂಗ್: ಉತ್ತರ ಪ್ರದೇಶ
9.ಸಾಧನಾ ಸಿಂಗ್: ಉತ್ತರ ಪ್ರದೇಶ
10.ಅಮರಪಾಲ್ ಮೌರ್ಯ: ಉತ್ತರ ಪ್ರದೇಶ
11.ಸಂಗೀತಾ ಬಲ್ವಂತ್: ಉತ್ತರ ಪ್ರದೇಶ
12.ನವೀನ್ ಜೈನ್: ಉತ್ತರ ಪ್ರದೇಶ
13.ಮಹೇಂದ್ರ ಭಟ್: ಉತ್ತರಾಖಂಡ್
14.ಸಮಿಕಾ ಭಟ್ಟಾಚಾರ್ಯ: ಪಶ್ಚಿಮ ಬಂಗಾಳ