Mysore
19
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ವಿಧಾನಸಭೆ ಕಲಾಪದಲ್ಲೂ ರಾಜಣ್ಣ ವಜಾ ಗದ್ದಲ: ಆರ್.‌ಅಶೋಕ್‌ ಗುಡುಗು

rajanna (1)

ಬೆಂಗಳೂರು: ವಿಧಾನಸಭೆ ಕಲಾಪದ ಎರಡನೇ ದಿನವಾದ ಇಂದು ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿದ ಬಗ್ಗೆ ಬಿಜೆಪಿ ನಾಯಕರು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.

ಸದನದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.‌ಅಶೋಕ್‌ ಅವರು, ಯಾವ ಕಾರಣಕ್ಕೆ ರಾಜಣ್ಣ ಅವರನ್ನು ವಜಾ ಮಾಡಲಾಗಿದೆ?. ಈ ಬಗ್ಗೆ ಇಂದೇ ಉತ್ತರ ಕೊಡಿ. ಇದರ ಹಿಂದೆ ಒಂದು ಷಡ್ಯಂತ್ರ ಇದೆ. ಪಿತೂರಿಯೂ ಇದೆ ಎಂದು ಗುಡುಗಿದರು.

ಇನ್ನು ಶಾಸಕ ಸುನೀಲ್‌ ಕುಮಾರ್‌ ಮಾತನಾಡಿ, ಆ ಪಿತೂರಿ, ಷಡ್ಯಂತ್ರ ಮಾಡಿದವರು ಯಾರು ಎಂದು ಹೇಳಿ ಎಂದು ಆಡಳಿತ ಪಕ್ಷದ ನಾಯಕರಿಗೆ ಆಗ್ರಹಿಸಿದರು.

Tags:
error: Content is protected !!