ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯ ಹಾಗೂ ಗುಡುಗು ಸಹಿತ ಮಳೆಯ ಅಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ ಹೊರಡಿಸಿದೆ.
ಸಿಡಿಲು ಮತ್ತು ಮಿಂಚಿನಿಂದ ಸಂಭವಿಸಬಹುದಾದ ಜೀವಹಾನಿ ತಡೆಗಟ್ಟಲು ಕರ್ನಾಟಕ ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ಪ್ರಮುಖ ಸುರಕ್ಷತಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಪ್ರಾಣಹಾನಿ ತಪ್ಪಿಸಲು ಜನರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದೆ.
ಮನೆಯ ಹೊರಗಿದ್ದಾಗ ಪಾಲಿಸಬೇಕಾದ ಸುರಕ್ಷತಾ ಕ್ರಮಗಳು: ಸುರಕ್ಷಿತ ಕಟ್ಟಡ ಸೇರಬೇಕು, ಮರಗಳಿಂದ ದೂರವಿರಿ, ಬಯಲು ಪ್ರದೇಶದಲ್ಲಿದ್ದರೆ ಕುಕ್ಕುರುಗಾಲಿನಲ್ಲಿ ಕುಳಿತುಕೊಳ್ಳಿ, ನೀರಿನಿಂದ ಹೊರಬನ್ನಿ, ಲೋಹದ ವಸ್ತುಗಳಿಂದ ದೂರವಿರಿ,
ಮನೆಯ ಒಳಗಿದ್ದಾಗ ಪಾಲಿಸಬೇಕಾದ ಸುರಕ್ಷತಾ ಕ್ರಮಗಳು: ಎಲೆಕ್ಟ್ರಾನಿಕ್ ಉಪಕರಣಗಳನ್ನು ಆಪ್ ಮಾಡಿ, ಪ್ಲಗ್‌ಗಳನ್ನು ತೆಗೆಯಿರಿ, ಫೋನ್ ಬಳಸಬಾರದು, ಕಿಟಕಿ ಹಾಗೂ ಬಾಗಿಲುಗಳಿಂದ ದೂರವಿರಿ, ಮಿಂಚಿನ ಸಮಯದಲ್ಲಿ ಸ್ನಾನ ಮಾಡುವುದು ಬೇಡ.





