Mysore
20
broken clouds

Social Media

ಶುಕ್ರವಾರ, 30 ಜನವರಿ 2026
Light
Dark

ರಾಜ್ಯದಲ್ಲಿ ದರ ಏರಿಕೆ| ಅರ್ಥಶಾಸ್ತ್ರ ತಿಳಿದೋರು ಬೆಲೆ ಏರಿಕೆ ವಿರೋಧಿಸಲ್ಲ: ಆರ್‌.ವಿ.ದೇಶಪಾಂಡೆ

ಬೆಂಗಳೂರು: ಅರ್ಥಶಾಸ್ತ್ರ ತಿಳಿದಿರುವವರು ಯಾರು ಸಹ ರಾಜ್ಯದಲ್ಲಿ ಬೆಲೆ ಏರರಿಕೆಯನ್ನು ವಿರೋಧಿಸುವುದಿಲ್ಲ ಎಂದು ಮಾಜಿ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಏಪಿಲ್‌.2) ಬೆಲೆ ಏರಿಕೆ ಖಂಡಿಸಿ ಬಿಜೆಪಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಪಕ್ಷ ಬೆಲೆ ಏರಿಕೆ ವಿರೋಧಿಸಿ ಅಹೋರಾತ್ರಿ ಧರಣಿ ಮಾಡುತ್ತಿರುವುದು ಅವರ ಇಚ್ಛೆ. ಆದರೆ ಅವರು ಅದರಲ್ಲಿ ಯಶಸ್ವಿಯಾಗುವುದಿಲ್ಲ. ಏಕೆಂದರೆ ರಾಜ್ಯದಲ್ಲಿ ಬಿಎಪಿ ಸರ್ಕಾರ ಅಧಿಕಾದಲ್ಲಿದ್ದಾಗ ಬೆಲೆ ಏರಿಕೆ ಮಾಡಿರಲಿಲ್ವಾ? ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ನೀತಿಗಳೇ ಪ್ರಮುಖ ಕಾರಣ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ರಾಜ್ಯ ಸರ್ಕಾರ ಹಾಲಿನ ದರವನ್ನು 4 ರೂ.ಗೆ ಹೆಚ್ಚಳ ಮಾಡಿದೆ. ಈ ಬೆಲೆ ಅಧಿಕವಾಗಲು ಕಾರಣ ಮೇವಿನ ಬೆಲೆ ಹೆಚ್ಚಾಗಿರುವುದು. ಸರ್ಕಾರಗಳು ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿರುವುದು ನಿಜವೇ. ಬೆಲೆ ಏರಿಸಿದಾಗ ಸ್ವಲ್ಪ ಅಡ್ಜೆಸ್ಟ್‌ ಮಾಡಿಕೊಳ್ಳಬೇಕು. ಆದರೆ ರಾಜ್ಯದ ಜನತೆಯ ಹಣವನ್ನು ಸರ್ಕಾರ ಲೂಟಿ ಮಾಡುತ್ತಿದೆ ಎಂದು ಹೇಳುವುದು ಸರಿಯಲ್ಲ ಎಂದರು.

ಕಾಂಗ್ರೆಸ್‌ ಸರ್ಕಾರ, ಸಾರ್ವಜನಿಕರಿಗೆ ತೊಂದರೆ ನೀಡಲು ಬೆಲೆ ಏರಿಕೆ ಮಾಡಿಲ್ಲ. ನಮ್ಮ ಸರ್ಕಾರ ಯಾವಾಗ ಏನೇ ಮಾಡಿದರೂ ನ್ಯಾಯ ಬದ್ಧವಾಗಿಯೇ ಮಾಡುತ್ತದೆ. ಇನ್ನು ಗ್ಯಾರಂಟಿ ಯೋಜನೆಯಿಂದ ರಾಜ್ಯದ ಜನತೆಗೆ ಅನುಕೂಲವಾಗುತ್ತಿದೆ. ಅಂತೆಯೇ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತರಲಿದೆ ಎಂದು ಹೇಳಿದರು.

ಇನ್ನು ಕೇಂದ್ರ ಸರ್ಕಾರವೇ ಪೆಟ್ರೋಲ್‌ ಮತ್ತು ಡಿಸೇಲ್‌ ಬೆಲೆಯನ್ನು ಏರಿಕೆ ಮಾಡಿದೆ. ದೇಶದಲ್ಲಿ ಕೆಲವೊಂದು ಬಾರಿ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗುತ್ತದೆ. ಅಲ್ಲದೇ ಅರ್ಥಶಾಸ್ತ್ರ ತಿಳಿದಿರುವವರು ಯಾರು ಸಹ ಬೆಲೆ ಏರಿಕೆಯನ್ನು ವಿರೋಧಿಸುವುದಿಲ್ಲ. ನಾನು ಹೇಳುತ್ತಿರುವುದು ಸುಳ್ಳಲ್ಲ, ಇದೇ ರಿಯಾಲಿಟಿ. ಇದನ್ನು ಅರ್ಥ ಮಾಡಿಕೊಂಡವರು ಯಾರು ಕೂಡ ನೀತಿ ಪಾಠ ಭೋದನೆ ಮಾಡುವುದಿಲ್ಲ ಎಂದು ತಿಳಿಸಿದರು.

Tags:
error: Content is protected !!