ಬೆಂಗಳೂರು: ಸಿಎಂ ಸಿದ್ದರಾಮಯ್ಯ ಶಾಂತಿ ಶಾಂತಿ ಎನ್ನುತ್ತಾರೆ. ಐಪಿಎಸ್ ಅಧಿಕಾರಿಗೆ ಹೊಡೆಯೋಕೆ ಹೋಗೋದು ಶಾಂತಿನಾ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸಮಾವೇಶದ ವೇಳೆ ಬಿಜೆಪಿ ಕಪ್ಪು ಪಟ್ಟಿ ಪ್ರದರ್ಶಿಸಿದ್ದಕ್ಕೆ ಎಎಸ್‌ಪಿ ಅವರ ಮೇಲೆ ಗರಂ ಆಗಿ ಸಿದ್ದರಾಮಯ್ಯ ಕೈ ಎತ್ತಿದ ಘಟನೆ ಬಗ್ಗೆ ಮಾತನಾಡಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಪೊಲೀಸ್ ಅಧಿಕಾರಿ ನಿಮ್ಮ ಮನೆ ಕಸ ಹೊಡೆಯೋರಾ? ಎಂದು ಕಿಡಿಕಾರಿದರು.
ಇದನ್ನೂ ಓದಿ:- ಸಿಎಂ ಸಿದ್ದರಾಮಯ್ಯ ಏಕೆ ಅಷ್ಟೊಂದು ಉದ್ವೇಗಕ್ಕೆ ಒಳಗಾದರು ಎಂಬುದು ಗೊತ್ತಿಲ್ಲ: ಸಚಿವ ಜಿ.ಪರಮೇಶ್ವರ್
ಇನ್ನು ಮುಂದುವರಿದು ಮಾತನಾಡಿದ ಅವರು, ಸಿದ್ದರಾಮಯ್ಯ ಪಾಕಿಸ್ತಾನದಲ್ಲೂ ಫೇಮಸ್ ಆಗಿದ್ದಾರೆ. ಸಿದ್ದರಾಮಯ್ಯ ಕಡಿಮೆ ಮತಗಳಿಂದ ಗೆದ್ದಿದ್ದಾರೆ. ಈಗ ಪಾಕ್‌ನಲ್ಲಿ ನಿಂತರೆ ಒಂದು ಲಕ್ಷ ಮತಗಳಿಂದ ಗೆಲ್ಲುತ್ತಾರೆ. ಪಾಕ್ ಪರ ಹೇಳಿಕೆಯನ್ನೂ ಡಿಕೆಶಿ ಸಹ ಬೆಂಬಲಿಸಿಲ್ಲ ಎಂದು ಹೇಳಿದರು.





