ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಿಗೆ, ಹಿರಿಯ ಶಾಸಕರಿಗೆ ರಕ್ಷಣೆ ಇಲ್ಲ ಅಂದ ಮೇಲೆ, ರಾಜ್ಯದ ಜನ ಸಾಮಾನ್ಯರಿಗೆ ರಕ್ಷಣೆ ಇದೆಯಾ? ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ದಲಿತ ಸಚಿವರೊಬ್ಬರು ತಮ್ಮ ಮೇಲೆ ನಡೆಯುತ್ತಿರುವ ಹನಿಟ್ರ್ಯಾಪ್ ಪ್ರಯತ್ನಗಳ ಬಗ್ಗೆ ಅಸಹಾಯಕರಾಗಿ ಸದನದಲ್ಲಿ ಹಂಚಿಕೊಂಡು ಸರ್ಕಾರದ ರಕ್ಷಣೆ ಕೋರಿದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಎಂದಿನ ನಟ್ಟು-ಬೊಲ್ಟು ಟೈಟು ಮಾಡುವ ಧಾಟಿಯಲ್ಲಿ, “ಹಲೋ ಎಂದರೆ ಹಲೋ ಎನ್ನುತ್ತಾರೆ”, “ಮಾಡಿದ್ದುಣ್ಣೋ ಮಹರಾಯ” ಎಂದು ಸಚಿವರ ಮೇಲೆಯೇ ಗೂಬೆ ಕೂರಿಸುವ ಅರ್ಥದಲ್ಲಿ ಮಾತಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಮ್ಮ ರಾಜ್ಯದಲ್ಲಿ ಒಬ್ಬ ಹಿರಿಯ ಶಾಸಕರು, ಹಾಲಿ ಸಚಿವರಿಗೇ ರಕ್ಷಣೆ ಇಲ್ಲ ಅಂದ ಮೇಲೆ ಈ ಹನಿಟ್ರ್ಯಾಪ್ ಕಾಂಗ್ರೆಸ್ ಸರ್ಕಾರದಲ್ಲಿ ಜನ ಸಾಮಾನ್ಯರಿಗೆ ಯಾವ ರಕ್ಷಣೆ ಇದೆ? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.





