Mysore
15
clear sky

Social Media

ಶುಕ್ರವಾರ, 23 ಜನವರಿ 2026
Light
Dark

ಡಿಸಿಎಂ ಡಿಕೆಶಿಗೆ ಮಾಜಿ ಸಿಎಂ ಹೇಳಿಕೆ ಕೇಳಿ ಮುಖದಲ್ಲಿ ಖುಷಿಯಿತ್ತು: ಆರ್‌.ಅಶೋಕ್‌

ಬೆಂಗಳೂರು: ಮಾಜಿ ಸಿಎಂ ವೀರಪ್ಪ ಮೋಯ್ಲಿ ಅವರು ಭಾನುವಾರ ಕಾರ್ಯಕ್ರಮವೊಂದರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಆಗೋದನ್ನು ಯಾರಿಂದಲೂ ತಪ್ಪಿಸಲು ಆಗಲ್ಲವೆಂದು ಹೇಳಿಕೆ ನೀಡಿದ್ದರು. ಆ ವೇಳೆ ಡಿಕೆಶಿ ಮುಖದಲ್ಲಿ ಖುಷಿ ಅರಳಿತ್ತು ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಲೇವಡಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಮಾರ್ಚ್.‌3) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸಹ ವಿಡಿಯೋ ಮೂಲಕ ಮೊಯ್ಲಿಯವರ ಅಬ್ಬರದ ಭಾಷಣ ನೋಡಿದೆ. ಆ ಭಾಷಣದಲ್ಲಿ ವೀರಪ್ಪ ಮೊಯ್ಲಿ ಅವರು ಡಿಕೆಶಿ ಸಿಎಂ ಆಗೋದನ್ನು ಯಾರಿಂದಲೂ ತಪ್ಪಿಸಲು ಆಗಲ್ಲವೆಂದು ಹೇಳಿಕೆ ನೀಡಿದ್ದಾರೆ. ಆದರೆ ಆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಮುಖದಲ್ಲಿ ಹಾಲಿನ ಮಳೆಯೋ, ಜೇನಿನ ಹೊಳೆಯೋ ಎನ್ನುವಂತಹ ಖುಷಿ ಎದ್ದು ಕಾಣುತ್ತಿತ್ತು ಎಂದು ಹೇಳಿದರು.

ವೀರಪ್ಪ ಮೊಯ್ಲಿ ಅವರು ಮಾಜಿ ಕೇಂದ್ರ ಸಚಿವ ಹಾಗೂ ಸಿಎಂ ಆಗಿದ್ದವರು, ಅವರಿಗೆ ಪವರ್‌ ಶೇರ್‌ ಒಪ್ಪಂದದ ಬಗ್ಗೆ ಗೊತ್ತಿದೆ. ಹೀಗಾಗಿ ಮೊಯ್ಲಿ ಅವರು ಧೈರ್ಯವಾಗಿಯೇ ಆ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ನಾನೇ ಸಿಎಂ ಎನ್ನುತ್ತಾರೆ. ನಾವು ಮಾತನಾಡಿದರೆ ಜಾತಕ ಎಂದು ಹೇಳುತ್ತಾರೆ. ಹಾಗಾದರೆ ಶನಿಬಲ, ಗುರುಬಲ ಯಾಕೆ ಕೇಳುತ್ತಾರೆ. ಅಲ್ಲದೇ ಕೋಡಿ ಮಠದ ಸ್ವಾಮೀಜಿ ಸಹ ಸಿದ್ದರಾಮಯ್ಯ ಸುಲಭಕ್ಕೆ ಅಧಿಕಾರ ಬಿಡಲ್ಲ ಎಂದಿದ್ದಾರೆ. ನಾನು, ಯಾವಾಗ ಒದ್ದು ಕಿತ್ತುಕೊಳ್ಳುತ್ತೀರಾ ಎಂದು ಹೇಳಿದ್ದಕ್ಕೂ ಕೋಡಿಮಠದ ಸ್ವಾಮೀಜಿ ಹೇಳಿಕೆಗೂ, ಮೊಯ್ಲಿ ಹೇಳಿಕೆಗೂ ತಾಳೆ ಆಯ್ತಲ್ಲ. ಸಿಎಂ ಸ್ಥಾನ ಸಾಕಪ್ಪ ಎಂದು ಸಿಎಂ ಸಿದ್ದರಾಮಯ್ಯ ಅವರೇ ಅಧಿಕಾರ ಬಿಟ್ಟು ಹೋಗುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಬಾರಿ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್‌ ಲಾಸ್ಟ್‌ ಬಜೆಟ್‌ ಆಗಿರಬಹುದು. ಲಾಸ್ಟ್‌ ಆದರೂ ಲೀಸ್ಟ್‌ ಅಲ್ಲ, ಅವರು ಅತೀ ಅಧಿಕ ಸಾಲಮಾಡಿ ಡಿ.ಕೆ.ಶಿವಕುಮಾರ್‌ ಅವರಿಗೆ ಬಿಟ್ಟು ಹೋಗಬಹುದು. ಸಿದ್ದರಾಮಯ್ಯ ಇರುತ್ತಾರೋ ಅಥವಾ ಹೋಗುತ್ತಾರೆ ಎನ್ನುವ ಎಪಿಸೋಡ್‌ ಕಳೆದ ಎರಡು ವರ್ಷಗಳಿಂದ ನಡೆಯುತ್ತಲೇ ಇದೆ ಎಂದು ತಿಳಿಸಿದರು.

Tags:
error: Content is protected !!