ಮೈಸೂರು: ವಿಧಾನ ಸೌಧದ ಮುಂಭಾಗ ಪಾಕಿಸ್ತಾನ್ ಜಿಂದಾಬಾಜ್ ಎಂದು ಘೊಷಣೆ ಕೂಗಿದವರನ್ನು ಜೈಲಿಗೆ ಹಾಕಲು ಹಿಂಜರಿಕೆ ಯಾಕೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಒಸಾಮ ಬಿನ್ ಲಾಡೆನ್, ಮುಲ್ಲಾ, ಉಮರ್ ಆಳ್ವಿಕೆಯಿದ್ದು, ಬಾಂಬ್ ಹಾಕುವವರಿಗೆ ಅವರು ರಕ್ಷಣೆ ಕೊಟುತ್ತಾರೆ ಹೊರತು, ಬಂಧಿಸುವ ಕೆಲಸ ಮಾಡುವುದಿಲ್ಲ. ಕರ್ನಾಟಕದಲ್ಲಿ ನಡೆಯುತ್ತಿರುವುದು ಇದೇ.
ಈ ಸಂಬಂಧದಲ್ಲಿ ರಾಜ್ಯ ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಎಫ್‌ಎಸ್‌ಎಲ್ ಮಾಹಿತಿ ನೀಡಿದ್ದರು, ಅದನ್ನು ತಿರುಚಲಾಗಿದೆ ಎಂದು ಹೇಳಿಕೆ ನೀಡಿ ಲಜ್ಜೆಗಟ್ಟು ಡಿಫೆಂಡ್ ಮಾಡುವು ಅವಶ್ಯಕತೆ ಏನಿದೆ. ಯಾರು ಪಾಕಿಸ್ತಾನ್ ಜಿಂದಾಬಾಜ್ ಎಂದು ಹೇಳುತ್ತಾನೋ ಅವನನ್ನು ಒಳಗೆ ಹಾಕಲು ಸರ್ಕಾರಕ್ಕೆ ಅಂಜಿಕೆ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರು ಮುಸ್ಲಿಮರ ಕೈ ಕಡೆದರೂ ಅವರು ಸಿದ್ದರಾಮಯ್ಯ ಅವರಿಗೆ ಮತ ಹಾಕುತ್ತಾರೆ. ಆದರೂ ಮತ್ತೇಕೆ ಸಿಎಂ ಅವರ ರಕ್ಷಣೆ ಮಾಡಲು ಹೊರಟಿದ್ದಾರೆ? ಇದೇ ರೀತಿ ಮುಂದುವರಿದರೆ ಕರ್ನಾಟಕ ಯಾವ ಸ್ಥಿತಿಗೆ ಬರುತ್ತೆ ಯೋಚನೆ ಮಾಡಿ. ಕರ್ನಾಟಕ ಸಭ್ಯ ರಾಜಕಾರಣ ಮತ್ತು ಕಾನೂನು ವ್ಯವಸ್ಥೆಗೆ ಹೆಸರುವಾಗಿಯಾಗಿದೆ. ಇಲ್ಲಿ ಅವರಿಗೆ ಸಹಾಯ ಮಾಡುವುದು ಸರಿಯಲ್ಲ.
ಸಿಎಂ ಅವರು ಪಾಕ್ ಪರ ಘೋಷಣೆ ಕೂಗಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಹೇಳಿರುವುದು ಸ್ವಾಗತಾರ್ಹ. ಅದು ಕೇವಲ ಮಾತಿನಲ್ಲಿರದೇ ಕೃತಿಯಲ್ಲು ಅದನ್ನು ತೋರಿ ಎಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು.





