ತುಮಕೂರು: ರಾಜ್ಯದಲ್ಲಿ ಮುಂದೆ ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬುದನ್ನು ನೋಡಿಕೊಂಡು ಅವರ ಭಾವಚಿತ್ರವನ್ನು ತಮ್ಮ ನೂತನ ಸಂಸದರ ಕಛೇರಿಯಲ್ಲಿ ಹಾಕುವಂತೆ ಕೆಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಮ್ಮ ಸಿಬ್ಬಂದಿಗೆ ಸಲಹೆ ನೀಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನೂತನವಾಗಿ ಆರಂಭಿಸಿರುವ ಕಛೇರಿಗೆ ನಿನ್ನೆ(ಆ.19) ಭೇಟಿ ನೀಡಿದ ಸಮಯದಲ್ಲಿ ಅವರು ಈ ರೀತಿ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಛೇರಿಯಲ್ಲಿ ಸಿದ್ದತೆ ಪರಿಶೀಲಿಸಿದ ಸಮಯದಲ್ಲಿ ಕಛೇರಿಯ ಪಡಸಾಲೆ ಗೋಡೆಗೆ ಮುಂದಿನ ಮುಖ್ಯಮಂತ್ರಿ ಭಾವಚಿತ್ರ ಹಾಕುವಂತೆ ತಮ್ಮ ಸಿಬ್ಬಂದಿಗೆ ಹೇಳಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆದರೆ ನನ್ನಷ್ಟು ಖುಷಿ ಪಡುವವರು ಯಾರು ಇಲ್ಲ ಎಂದು ಹೇಳಿದರು.