545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದ ಕಾರಣದಿಂದಾಗಿ ರದ್ದಾಗಿದ್ದ ಪರೀಕ್ಷೆಯನ್ನು ಮತ್ತೆ ಬರೆಯಲು ದಿನಾಂಕ ನಿಗದಿಯಾಗಿದೆ. ಜನವರಿ 23ರಂದು ಈ ಪರೀಕ್ಷೆ ನಡೆಯಲಿದ್ದು, ಇದರ ಕುರಿತಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.
ಈ ಹಿಂದೆ ಡಿಸೆಂಬರ್ 23ರಂದು ಈ ಮರುಪರೀಕ್ಷೆಯನ್ನು ನಡೆಸಬೇಕಿತ್ತು. ಆದರೆ ಪರೀಕ್ಷೆಗೆ ತಯಾರಾಗಲು ಅಭರ್ಥಿಗಳಿಗೆ ಕಾಲಾವಕಾಶ ಬೇಕು ಎಂದು ಬೆಳಗಾವಿ ಅಧಿವೇಶನದಲ್ಲಿ ಶಾಸಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅದರಂತೆ ಸರ್ಕಾರ ಈ ಪರೀಕ್ಷೆಯನ್ನು ಜನವರಿ 23ಕ್ಕೆ ಮುಂದೂಡಿತ್ತು.
ವೇಳಾಪಟ್ಟಿ: ಮಂಗಳವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆವರೆಗೆ ಪೇಪರ್ -1 (50 ಅಂಕ) ಮತ್ತು ಮಧ್ಯಾಹ್ನ 1 ಗಂಟೆಯಿಂದ 2.30ರವರೆಗೆ ಪೇಪರ್ -2 (150 ಅಂಕ) ಪರೀಕ್ಷೆ ನಡೆಯಲಿದೆ.