Mysore
20
clear sky

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಖ್ಯಾತ ಸಾಹಿತಿ ಪ್ರೊ. ಅಮೃತ ಸೋಮೇಶ್ವರ ಇನ್ನಿಲ್ಲ

ಖ್ಯಾತ ಸಾಹಿತಿ, ಯಕ್ಷಗಾನ ಪ್ರಸಂಗ ಕರ್ತೃ, ಸಂಶೋಧಕ, ಅನುವಾದಕ, ವಿಮರ್ಶಕ, ಕವಿ ಪ್ರೊ. ಅಮೃತ ಸೋಮೇಶ್ವರ ಅವರು ಇಂದು ( ಜನವರಿ 6 ) ಸೋಮೇಶ್ವರದಲ್ಲಿನ ತಮ್ಮ ಸ್ವಗೃಹ ʼಒಲುಮೆʼಯಲ್ಲಿ ನಿಧನ ಹೊಂದಿದ್ದಾರೆ.

ಸಮಾಜಮುಖಿ ಚಿಂತನೆಯುಳ್ಳ ಸಾಹಿತಿಯಾಗಿದ್ದ ಅಮೃತ ಸೋಮೇಶ್ವರ ಅವರು 1935ರ ಸೆಪ್ಟೆಂಬರ್‌ 27ರಂದು ಜನಿಸಿದ್ದರು. ಸೋಮೇಶ್ವರದ ಅಡ್ಕ ನಿವಾಸಿಯಾಗಿರುವ ಅಮೃತ ಸೋಮೇಶ್ವರ ತಮ್ಮ ಬಾಲ್ಯವನ್ನು ಮುಂಬೈನಲ್ಲಿ ಕಳೆದರು. ಬಳಿಕ ಐದು ವರ್ಷ ವಯಸ್ಸಿನವರಿದ್ದಾಗ ಊರಿಗೆ ಮರಳಿದ ಇವರು ಐದನೇ ತರಗತಿವರೆಗೆ ಕೋಟೆಕಾರಿನಲ್ಲಿರುವ ಸ್ಟೆಲಾ ಮೇರೀಸ್‌ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿವರೆಗೂ ವ್ಯಾಸಂಗ ಮಾಡಿದರು. \

ಬಳಿಕ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಆರನೇ ತರಗತಿ ಕಲಿಕೆಯನ್ನು ಮುಂದುವರಿಸಿದ ಅಮೃತ ಸೋಮೇಶ್ವರ 1954ರಲ್ಲಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದರು. ಸಾಹಿತ್ಯದಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದ ಅಮೃತ ಸೋಮೇಶ್ವರ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇದರ ಜತೆಗೆ ಯಕ್ಷಗಾನ ಪ್ರಸಂಗಗಳನ್ನೂ ಸಹ ರಚಿಸಿರುವ ಇವರು ಅನೇಕ ಧ್ವನಿಸುರುಳಿಗಳಿಗೆ ಸಾಹಿತ್ಯ ಬರೆದಿದ್ದಾರೆ. ಅಮೃತ ಸೋಮೇಶ್ವರ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ