ಬೆಂಗಳೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಹಾಗೂ ಬಿಜೆಪಿ ನೇತೃತ್ವದ ಮೈತ್ರಿ ಪಕ್ಷಗಳು ನಡೆಸುತ್ತಿರುವ ಮೈಸೂರು ಚಲೋ ಬಗ್ಗೆ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಸೂಕ್ತ ದಾಖಲಾತಿಗಳ ಸಹಿತ ಮಾತಾನಡಿ ಎಂದು ಕಿಡಿಕಾರಿದ್ದಾರೆ.
ಮುಡಾ ಹಗರಣದ ದಾಖಲೆ ಮುಂದಿಟ್ಟುಕೊಂಡು ಬಳಿಕ ಬಿಜೆಪಿ-ಜಿಡಿಎಸ್ ನವರು ಪಾದಯಾತ್ರೆ ಮಾಡಲಿ ಎಂದು ಆಗ್ರಹಿಸಿದರು.
ಇತ್ತ ಬಿಜೆಪಿ ಭಾಗಶಃ ಜೆಡಿಎಸ್ ಒಳಗಡೆ ಮುಳುಗಿ ಹೋಗಿದೆ. ಈ ಪಾದಯಾತ್ರೆಗೆ ಹಲವಾರು ಬಿಜೆಪಿ ನಾಯಕರು ಗೈರಾಗಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಇದರ ಭಾಗವಾಗಿಲ್ಲ ಬಿವೈ ವಿಜಯೇಂದ್ರ ಅವರ ನಾಯಕತ್ವವನ್ನು ಹಲವಾರು ಜನರು ತಿರಸ್ಕರಿಸುತ್ತಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟಿಲ್ಲ ಎಂದು ಹೇಳಿದರು.
ಪ್ರತಿಭಟನೆ ಜನ್ಮಸಿದ್ದ ಹಕ್ಕಾಗಿದೆ. ಆದರೆ ಇಲ್ಲಿ ಬಿಜೆಪಿ ಜೆಡಿಎಸ್ ನವರ ಕಾಲಿಗೆ ಬಿದ್ದು ಪ್ರತಿಭಟನೆ ಮಾಡುತ್ತಿದ್ದಾರೆ. ಜತೆಗೆ ರಾಜ್ಯಪಾಲರನ್ನು ಇಟ್ಟುಕೊಂಡು ಆಡಳಿತ ಪಕ್ಷದ ವಿರುದ್ಧ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಾಕಿದರು.



