ಬೆಂಗಳೂರು: ಲೋಕಸಭಾ ಚುನಾವಣಾ ಕಣ ರಂಗೇರುತ್ತಿದ್ದು ಎಲ್ಲಾ ಪಕ್ಷಗಳು ಆಯಾ ಸಮರಾಭ್ಯಾಸ ಮಾಡ್ತಿದ್ದಾರೆ ಅಂದ್ರೆ ತಪ್ಪಾಗಲಾರದು ಹಾಗೆ ಬಿಜೆಪಿ – ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಈ ಬಾರೀ ರಾಜ್ಯದಲ್ಲಿ ಬಿಜೆಪಿ ಎಲ್ಲಿಲ್ಲದ ಪ್ರಚಾರ ಕೈಗೊಂಡಿದ್ದು ಈ ಬಾರಿ ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ ಬರುತ್ತಿದ್ದು ಕರ್ನಾಟಕ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲಿದ್ದಾರೆ.
ಮಾರ್ಚ್ 15ರಿಂದ ಪ್ರಧಾನಿ ಮೋದಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಮಾಡುವ ಸಾಧ್ಯತೆ ಇದೆ. ಚುನಾವಣಾ ಪ್ರಚಾರಕ್ಕಾಗಿ ಮೋದಿಯವರ ತಾತ್ಕಾಲಿಕ ಪ್ರವಾಸ ಪಟ್ಟಿಯೊಂದು ತಯಾರಾಗಿದ್ದು, ಅದರ ಪ್ರಕಾರ ಮಾರ್ಚ್ 15ರಿಂದ ಮಾರ್ಚ್ 19ರವರೆಗೆ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಮೋದಿ ಸಂಚರಿಸಿ ಪ್ರಚಾರ ನಡೆಸಲಿದ್ದಾರೆ.
ಮೋದಿಯವರು ಮಾರ್ಚ್ 15ಕ್ಕೆ ಕೋಲಾರ, ಮಾರ್ಚ್ 17ಕ್ಕೆ ಶಿವಮೊಗ್ಗ, ಮಾರ್ಚ್ 18ಕ್ಕೆ ಬೀದರ್, ಮಾರ್ಚ್ 19ಕ್ಕೆ ಧಾರವಾಡದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಬಲ್ಲ ಮೂಲಗಳ ಮಾಹಿತಿ ದೊರೆತಿದೆ.
2024ರ ಲೋಕಸಭೆ ಚುನಾವಣೆಗೆ ಮೊದಲ ಪಟ್ಟಿ ರಿಲೀಸ್ ಮಾಡಿದ್ದ ಬಿಜೆಪಿ ನಾಯಕರು ಎರಡನೇ ಪಟ್ಟಿ ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ನಿನ್ನೆ ನಡೆಯಬೇಕಿದ್ದ ಬಿಜೆಪಿ ಸಿಇಸಿ ಸಭೆಯನ್ನ ಇಂದಿಗೆ ಮುಂದೂಡಿಕೆ ಮಾಡಲಾಗಿದೆ. ಇಂದು ಸಂಜೆ 6 ಗಂಟೆಗೆ ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆಯಲಿದೆ