Mysore
16
clear sky

Social Media

ಮಂಗಳವಾರ, 20 ಜನವರಿ 2026
Light
Dark

ನಮ್ಮ ಮೆಟ್ರೊ ʻಹಳದಿ ಮಾರ್ಗʼಕ್ಕೆ ಪ್ರಧಾನಿ ಮೋದಿ ಚಾಲನೆ

pm (1)

ಬೆಂಗಳೂರು : ನಮ್ಮ ಮೆಟ್ರೊ ಹಳದಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದ್ದಾರೆ. ಸೋಮವಾರದಿಂದ ವಾಣಿಜ್ಯ ಸಂಚಾರ ಶುರುವಾಗಲಿದೆ. ಹಳದಿ ಮಾರ್ಗಕ್ಕೆ ಚಾಲನೆ ನೀಡಿದ ಬಳಿಕ ಮೋದಿಯವರು, ಇದೇ ಮೆಟ್ರೋ ರೈಲಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್​ವರೆಗೆ ಸಂಚಾರ ಆರಂಭಿಸಿದರು.

ಈ ಮೆಟ್ರೋ ರೈಲನ್ನು ಮಹಿಳಾ ಲೋಕೋ ಪೈಲಟ್ ವಿನುತಾ ಅವರು ಚಾಲನೆ ಮಾಡುತ್ತಿದ್ದು, ಮೋದಿಯವರೊಂದಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಸೇರಿ 117 ಜನರು ಪ್ರಯಾಣ ನಡೆಸಿದ್ದಾರೆ.

ಮೋದಿಯವರೊಂದಿಗೆ ಎಂಟು ಜನ ಮಕ್ಕಳು, ಎಂಟು ಮಂದಿ ಮೆಟ್ರೋ ಉದ್ಯೋಗಿಗಳು, ಸರ್ಕಾರಿ ಪ್ರೌಢಶಾಲೆಯ ​16 ವಿದ್ಯಾರ್ಥಿಗಳು, ಆರ್.ವಿ ರೋಡ್ ಟು ಬೊಮ್ಮಸಂದ್ರ ಯೆಲ್ಲೋ ಲೈನ್ ಮಾರ್ಗದಲ್ಲಿ ಮಾರ್ಗದಲ್ಲಿ ಕೆಲಸ ಮಾಡಿದ ಎಂಟು ಕಾರ್ಮಿಕರು ಮತ್ತು 8 ಜನಸಾಮಾನ್ಯರು ಸಂಚಾರ ನಡೆಸಿದ್ದಾರೆ.

ರಾಗಿಗುಡ್ಡದಿಂದ ಮೆಟ್ರೋ ರೈಲು ಸಂಚಾರ ಆರಂಭಗೊಂಡು ಜಯದೇವ ಮೆಟ್ರೋ ಸ್ಟೇಷನ್​ನಲ್ಲಿ ಐದು ನಿಮಿಷ ನಿಲ್ಲಲ್ಲಿದೆ. ನಂತರ ಸಿಲ್ಕ್ ಬೋರ್ಡ್, ಹೊಂಗಸಂದ್ರ, ಸಿಂಗಸಂದ್ರ, ಎಲೆಕ್ಟ್ರಾನಿಕ್ ಸಿಟಿ, ಕೊನಪ್ಪನ ಅಗ್ರಹಾರ ಮೆಟ್ರೋ ಸ್ಟೇಷನ್​ನಲ್ಲಿ ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ಗಣ್ಯರು ರೈಲಿನಿಂದ ಇಳಿಯಲಿದ್ದಾರೆ.

2026ರ ಮಾರ್ಚ್ ವೇಳೆಗೆ 12 ರೈಲು ಸೇರ್ಪಡೆ ಆಗಲಿದ್ದು, ಒಟ್ಟು 15 ರೈಲುಗಳು ಈ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಿವೆ. ಮುಂದಿನ ದಿನಗಳಲ್ಲಿ ಟ್ರಿಪ್‌ಗಳ ಸಂಖ್ಯೆ ಕೂಡ ಹೆಚ್ಚಾಗಲಿದ್ದು, ನಿತ್ಯ 3.5 ಲಕ್ಷ ಮಂದಿ ಪ್ರಯಾಣಿಸಬಹುದು ಎಂದು ಬಿಎಂಆರ್ಸಿಎಲ್‌ ಅಂದಾಜಿಸಿದೆ.

ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ (ಸಿಎಸ್‌ಬಿ) ಡಬ್ಬಲ್ ಡೆಕ್ಕರ್ (3.3 ನಿರ್ಮಿಸಲಾಗಿದೆ. ಡಬ್ಬಲ್ ಡೆಕ್ಕರ್ ಪ್ರೈಓವರ್‌ನ ಮೇಲ್ಬಾಗದಲ್ಲಿ ನಮ್ಮ ಮೆಟ್ರೋ ರೈಲು ಓಡಾಡಲಿದೆ. ಕೆಳಭಾಗ ವಾಹನಗಳ ಓಡಾಟಕ್ಕೆ ಮೀಸಲಾಗಿದೆ. ಜೊತೆಗೆ ಈ ಮಾರ್ಗದ ಜಯದೇವ ಇಂಟರ್ ಚೇಂಜ್ ಮೆಟ್ರೋ ನಿಲ್ದಾಣ ಅತೀ ಎತ್ತರದ ಮೆಟ್ರೋ ನಿಲ್ದಾಣ ಎನ್ನಿಸಿದ್ದು 5 ಹಂತದ ಸಾರಿಗೆ ವ್ಯವಸ್ಥೆ ನಿರ್ಮಾಣವಾಗಿದೆ. 2026ರ ಡಿಸೆಂಬರ್‌ಗೆ ಈ ಮಾರ್ಗ ಉದ್ಘಾಟನೆ ಆಗಲಿದ್ದು, ಬಳಿಕವಷ್ಟೆ ಇದರ ಪೂರ್ಣ ಬಳಕೆ ಆಗಲಿದೆ.

ಹಳದಿ ಮಾರ್ಗ ಸದ್ಯ ಕೇವಲ ಮೂರು ರೈಲುಗಳಿಂದ ಕಾರ್ಯಾಚರಣೆ ಆಗಲಿದೆ. ಚಾಲಕ ರಹಿತ ರೈಲಿಗಾಗಿ ಸಿಬಿಟಿಸಿ (ಕಮ್ಯುನಿಕೇಶನ್ ಬೇಸ್ ಟ್ರೈನ್ ಕಂಟ್ರೋಲ್) ತಂತ್ರಜ್ಞಾನ ಬಳಸಲಾಗಿದೆ. 2026ರ ವೇಳೆಗೆ ಈ ಮಾರ್ಗಕ್ಕೆ 14 ರೈಲು ಸೇರ್ಪಡೆ ಆಗಲಿದ್ದು, ಆಗ 90 ಸೆಕೆಂಡ್‌ಗೆ ಒಮ್ಮೆ ರೈಲುಗಳು ಸಂಚರಿಸಲಿವೆ.

Tags:
error: Content is protected !!