ಹುಬ್ಬಳ್ಳಿ : ಏನು ಮಾಡಿಲ್ಲ ಎನ್ನುವುದಾದರೆ ಮೈಸೂರು ಡಿಸಿ ವರ್ಗಾವಣೆ ಮಾಡಿದ್ದು ಯಾಕೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಮುಡಾ ಹಗರಣ ಬಹಳ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರವಾಗಿದೆ. ಮೇಲ್ನೋಟಕ್ಕೆ ಇದು ಸ್ಪಷ್ಟವಾಗಿದೆ. ೨೦೧೭ ರಲ್ಲಿ ಈ ನಿರ್ಣಯಗಳಾಗಿವೆ. ಸಿಎಂ ಸಿದ್ದರಾಮಯ್ಯ ಅವರ ಗಮನದಲ್ಲೆ ಆಗಿರುವ ಬಹುದೊಡ್ಡ ಹಗರಣ ಇದು ಎಂದು ಆರೋಪಿಸಿದರು.
ಅಲ್ಲದೆ ಈ ಹಗರಣದಲ್ಲಿ ೪ ಸಾವಿರ ಕೋಟಿ ಅಕ್ರಮ ಎಸಗಿರುವ ಬಗ್ಗೆ ಆರೋಪಗಳಿಗೆ. ಬಿಜೆಪಿ ಕಾಲದಲ್ಲಿ ಕೊಟ್ಟಿದ್ದು ಎನ್ನುತ್ತಾರೆ. ಈ ಅವ್ಯವಹಾರ ಆಗಿದ್ದು೨೦೧೩ ರಿಂದ ೨೦೧೮ ರವರೆಗೆ. ನೀವು ಏನು ಮಾಡಿಲ್ಲ ಅಂದ್ರೆ ಡಿಸಿ ಯಾಕೆ ವರ್ಗಾವಣೆ ಮಾಡಿದ್ದೀರಿ..? ಡಿಸಿ ಕಳೆದ ಒಂದು ವರ್ಷದಲ್ಲಿ ೧೫ ಪತ್ರ ಬರೆದಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಹಾಗೂ ಮಗನ ಜಮೀನು ವಶಪಡಿಸಿಕೊಂಡಿದ್ದಾರೆ ಎಂದರು.
ಜೊತೆಗೆ ಇದು ತಮ್ಮ ಸ್ವಂತ ಲಾಭಕ್ಕೆ ಮಾಡಿಕೊಳ್ಳಲು ಮಾಡಿರುವ ದೊಡ್ಡ ಹಗರಣ. ಸಿದ್ದರಾಮಯ್ಯ ಏನು ಮಾಡಿಲ್ಲ ಎನ್ನುವುದಾದರೆ ಪ್ರಕರಣದ ತನಿಖೆಯನ್ನ ಸಿಬಿಐಗೆ ಕೊಡಬೇಕು ಎಂದು ಆಗ್ರಹಿಸಿದರು.





