ಬೆಂಗಳೂರು : ಲೈಗಿಂಕ ದೌರ್ಜನ್ಯ ಹಾಗೂ ಸಹಜ ಲೈಗಿಂಕ ಕಿರುಕುಳ ಆರೋಪ ಪ್ರಕರಣ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಎಂಎಲ್ ಸಿ ಸೂರಜ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಸಿಐಡಿ ಸೈಬರ್ ಕ್ರೈಂ ಠಾಣೆ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಅರ್ಜಿವಿಚಾರಣೆ ನಡೆಯಲಿದೆ. ಹೊಳೆನರಸೀಪುರ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸೂರಜ್ ರೇವಣ್ಣ ಜಾಮೀನು ಆದೇಶವನ್ನು ಕೋರ್ಟ್ ಇಂದು ಪ್ರಕಟಿಸಲಿದೆ.
ಲೈಗಿಂಕ ದೌರ್ಜನ್ಯ ಆರೋಪದ ಮೇಲೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅಸಹಜ ಲೈಗಿಂಕ ದೌರ್ಜನ್ಯ ಆರೋಪದಲ್ಲಿ ಸಹೋದರ ಸೂರಜ್ ರೇವಣ್ಣ ಕೂಡ ಜೈಲಿನಲ್ಲಿದ್ದು, ಇಂದು ಸಹೋದರರಿಗೆ ಜಾಮೀನು ಸಿಗುತ್ತಾ ಎಂಬುವುದನ್ನ ಕಾದುನೋಡಬೇಕಾಗಿದೆ.