Mysore
27
scattered clouds

Social Media

ಶನಿವಾರ, 24 ಜನವರಿ 2026
Light
Dark

ಚುನಾವಣಾ ಜಾಹೀರಾತುಗಳಿಗೆ ಪೂರ್ವಾನುಮತಿ ಕಡ್ಡಾಯ

‌ಲೋಕಸಭಾ ಚುನಾವಣೆಯಲ್ಲಿ ವಿವಿಧ ಮಾಧ್ಯಮಗಳಾದ ದಿನಪತ್ರಿಕೆಗಳು,ಟಿ.ವಿ,ಕೇಬಲ್ ನೆಟ್ವರ್ಕ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮೇಲೆ ಎಂ.ಸಿ.ಎಂ.ಸಿ ಸಮಿತಿ ವತಿಯಿಂದ ನಿಗಾವಹಿಸಲಾಗುತ್ತಿದ್ದು ಚುನಾವಣಾ ಜಾಹೀರಾತುಗಳಿಗೆ ಪೂರ್ವಾನುಮತಿ ಕಡ್ಡಾಯವಾಗಿರುತ್ತದೆ.

ಜಿಲ್ಲಾಧಿಕಾರಿ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲುಸ್ತುವಾರಿ ಸಮಿತಿ ( ಎಂ.ಸಿ.ಎಂ.ಸಿ) ವಿವಿಧ ಮಾಧ್ಯಮಗಳಲ್ಲಿ ದಿನನಿತ್ಯ ಪ್ರಸಾರವಾಗುವ ಸುದ್ದಿ, ಜಾಹೀರಾತುಗಳಲ್ಲಿ ಯಾವುದಾದರೂ ಉಲ್ಲಂಘನೆ ವರದಿಗಳು ಕಂಡುಬಂದರೆ ಅಥವ ವಿದ್ಯುನ್ಮಾನ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಎಂ.ಸಿ.ಎಂ.ಸಿ ಸಮಿತಿಯ ಅನುಮತಿಯಿಲ್ಲದೆ ಜಾಹೀರಾತು ಪ್ರಕಟಿಸುವಂತಿಲ್ಲ,ಒಂದು ವೇಳೆ ಸಮಿತಿಯ ಪೂರ್ವಾನುಮತಿ ಇಲ್ಲದೇ ಜಾಹೀರಾತು ಪ್ರಕಟಿಸಿದರೆ ಸಂಬಂಧಿಸಿದ ಅಭ್ಯರ್ಥಿಗಳಿಗೆ ನೋಟೀಸ್ ನೀಡಲಾಗುವುದು.

ವಿದ್ಯುನ್ಮಾನ ಮಾಧ್ಯಮ (ಎಲಕ್ಟ್ರಾನಿಕ್ ) ಗಳಾದ ಟಿ.ವಿ,ರೇಡಿಯೋ, ಮೊಬೈಲ್ ಸಂದೇಶ, ಧ್ವನಿ ಮುದ್ರಿತ ಸಂದೇಶಗಳು, ಬಲ್ಕ್ ಎಸ್.ಎಂ.ಎಸ್ ಹಾಗೂ ಸಾಮಾಜಿಕ ಜಾಲತಾಣಗಳಾದ, ಪೇಸ್ ಬುಕ್, ಎಕ್ಸ್ , ಇನ್ಸ್ಟಾಗ್ರಾಂ, ಗಳಲ್ಲಿ ಪ್ರಚಾರ ಕೈಗೊಳ್ಳುವವರು ಎಂ.ಸಿ.ಎಂ.ಸಿ ಪೂರ್ವಾನುಮತಿ ಪಡೆಯಬೇಕು.

ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಣೆಗೆ ಮತದಾನ ಹಾಗೂ ಮತದಾನದ ಮುನ್ನಾದಿನ ಅಂದರೆ ಏಪ್ರಿಲ್ 26 ಹಾಗೂ 27 ರಂದು ಜಾಹೀರಾತು ಪ್ರಕಟಣೆಗೆ ಪೂರ್ವಾನುಮತಿ ಕಡ್ಡಾಯ.

ಪಾವತಿ ಸುದ್ದಿ ( ಪೇಯ್ಡ್ ನ್ಯೂಸ್) ನೈತಿಕ ಮತದಾನಕ್ಕೆ ವಿರುದ್ದವಾದ ನಡೆಯಾಗಿದ್ದು, ಪಾವತಿ ಸುದ್ದಿ ಪ್ರಕಟಿಸುವ ಮಾಧ್ಯಮಗಳ ವಿರುದ್ದ ಕ್ರಮ ಜರುಗಿಸಲಾಗುವುದು, ಪುನರಾವರ್ತನೆ ಆದರೆ ದಂಡ ವಿಧಿಸುವುದರೊಂದಿಗೆ ಪತ್ರಿಕೆಗಳಿಗಾದರೆ ಪಿ.ಸಿ.ಐ ಹಾಗೂ ಟಿ.ವಿ.ಮಾಧ್ಯಮಗಳಿಗೆ ಎನ್.ಬಿ.ಎಸ್.ಎ ಸಂಸ್ಥೆಗಳಿಗೆ ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಪತ್ರಿಕೆಗಳು ಮತದಾನ ಹಾಗೂ ಮತದಾನದ ಮುನ್ನಾದಿನ ಪೂರ್ವಾನುಮತಿ ಪಡೆದು ಜಾಹೀರಾತು ಪ್ರಕಟಿಸಬೇಕಾಗುತ್ತದೆ

ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳು ಜಾಹೀರಾತು ಪ್ರಕಟಣೆಗೆ ಅನುಮತಿ ಪಡೆಯಲು ನಿಗದಿತ ನಮೂನೆಗಳಲ್ಲಿ ಎಂ.ಸಿ.ಎಂ.ಸಿ ಸಮಿತಿಗೆ ಅರ್ಜಿ ಸಲ್ಲಿಸಬೇಕು ಎಂದು ಚುನಾವಣಾಧಿಕಾರಿ ಹಾಗೂ ಎಂ.ಸಿ.ಎಂ.ಸಿ ಸಮಿತಿಯ ಅಧ್ಯಕ್ಷರಾದ ಡಾ.ರಾಜೇಂದ್ರ ಕೆ.ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:
error: Content is protected !!