ಬೆಂಗಳೂರು: ಭೂಮಿ ಒತ್ತುವರಿ ದ್ವೇಷದ ರಾಜಕಾರಣ ಎಂದು ಹೇಳಿಕೆ ನೀಡಿದ ಕೇಂದ್ರ ಸಚಿವ ಹೆಚ್‌ಡಿಕೆಗೆ, ಸುಮ್ಮನೇ ಇದ್ದರೆ ಅವರಿಗೂ ಕ್ಷೇಮ ನಮಗೂ ಕ್ಷೇಮ ಎಂದು ಹೇಳುವ ಮೂಲಕ ಡಿಸಿಎಂ ಡಿಕೆಶಿ ವಾರ್ನ್ ಮಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ನೋಡ್ರಿ ಇಡೀ ದೇಶಕ್ಕೆ ಗೊತ್ತು. ನಾವೇನಾದರೂ ಕೇಸ್ ಹಾಕಿದ್ದೇವಾ? ಸುಮಾರು 20 ವರ್ಷಗಳಿಂದಲೂ ಆ ಹಿರೇಮಠ ನನ್ನ ಮೇಲೂ ಕೇಸ್ ಹಾಕಿದ್ದಾರೆ. ಅವರ ಮೇಲೆಯೂ ಕೇಸ್ ಹಾಕಿದ್ದಾರೆ. ಇವರು ಯಾಕೆ ಗಾಬರಿಯಾಗಬೇಕು ಎಂದು ತಿರುಗೇಟು ನೀಡಿದರು.
ನೋಟಿಸ್ ನೀಡಿರುವುದು ಕೋರ್ಟ್. ಸಿದ್ದರಾಮಯ್ಯ ಮತ್ತು ನಾವು ಏನ್ ಮಾಡ್ತೀವಿ ಅಂತಾ ಕಿಡಿಕಾರಿದರು.
ದ್ವೇಷದ ರಾಜಕಾರಣ ಎನ್ನುವುದು ಅವರ ಡಿಎನ್‌ಎದಲ್ಲಿಯೇ ಇದೆ. ಅವರು ಮತ್ತು ಅವರ ತಂದೆ ದೇವೇಗೌಡ ಅವರು ನನ್ಮೇಲೆ ಏನ್ ಏನ್ ಕೇಸ್ ಹಾಕಿಸಿದ್ರು ಎನ್ನುವುದು ಗೊತ್ತಿದೆ. ನಮಗೂ ಬಳ್ಳಾರಿಗೂ ಸಂಬಂಧವೇ ಇಲ್ಲ. ಆವಾಗ ಹಾಕಿಸಿದ್ದು ಕೇಸ್ ಅಲ್ಲವಾ. ಕುಮಾರಸ್ವಾಮಿ ಸುಮ್ಮನೇ ಮರ್ಯಾದೆಯಿಂದ ಇದ್ದರೆ ಅವರಿಗೂ ಕ್ಷೇಮ ಎಂದು ಎಚ್ಚರಿಕೆ ನೀಡಿದರು.





