Mysore
18
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ನಾನು ನಂದಿನಿ ಹಾಡಿನ ಖ್ಯಾತಿಯ ವಿಕ್ಕಿಪೀಡಿಯಾ ವಿಕಾಸ್‌ಗೆ ಶಾಕ್‌ ಕೊಟ್ಟ ಪೊಲೀಸರು

ಬೆಂಗಳೂರು: ಮಾದಕವಸ್ತು ವ್ಯಸನದ ಬಗ್ಗೆ ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ನಾನು ನಂದಿನಿ, ಬೆಂಗಳೂರಿಗೆ ಬಂದೀನಿ ಹಾಡಿನ ಖ್ಯಾತಿಯ ವಿಕ್ಕಿಪೀಡಿಯಾ ವಿಕಾಸ್‌ಗೆ ಪೊಲೀಸರು ಬಿಗ್‌ ಶಾಕ್‌ ಕೊಟ್ಟಿದ್ದಾರೆ.

ಡ್ರಗ್ಸ್‌ ಪದ ಬಳಸಿ ಮಾಡಿದ್ದ ವಿಡಿಯೋವನ್ನು ಪೊಲೀಸರು ಡಿಲೀಟ್‌ ಮಾಡಿಸಿದ್ದಾರೆ. ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರು, ವಿಕಾಸ್‌ಗೆ ದೂರವಾಣಿ ಕರೆ ಮಾಡಿ ಡ್ರಗ್ಸ್‌ ಪದ ಬಳಸಿ ಮಾಡಲಾಗಿದ್ದ ವಿಡಿಯೋವನ್ನು ತೆಗೆಸಿದ್ದಾರೆ.

ಭಿನ್ನ ವಿಭಿನ್ನ ರೀಲ್ಸ್‌ಗಳನ್ನು ಶೇರ್‌ ಮಾಡಿ ಸಖತ್‌ ಸುದ್ದಿಯಲ್ಲಿ ಇರುತ್ತಿದ್ದ ಕಂಟೆಂಟ್‌ ಕ್ರಿಯೇಟರ್‌ ವಿಕ್ಕಿಪೀಡಿಯಾ ವಿಕಾಸ್‌ ಅವರು, ಡ್ರಗ್ಸ್‌ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ರೀಲ್ಸ್‌ ಮಾಡಿ ತಮ್ಮ ಇನ್ಸ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದರು. ಇದೇ ರೀಲ್ಸ್‌ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರುವಂತೆ ಮಾಡಿದ್ದು, ಇದೀಗ ಅದನ್ನು ಬೈಯ್ಯಪ್ಪನಹಳ್ಳಿ ಪೊಲೀಸರು ಡಿಲೀಟ್‌ ಮಾಡಿಸಿದ್ದಾರೆ.

ಇಂದಿನ ಯುವಕರು ಎಂಜಾಯ್‌ಗೋಸ್ಕರ ಅಂತ ಮದ್ಯಪಾನ ಮಾಡುವುದು, ಸಿಗರೇಟ್‌ ಸೇದೋದು, ಹುಡುಗೀರ್‌ ಹಿಂದೆ ಹೋಗ್ತಾರೆ. ಆದರೆ, ನಾನು ಎಂಜಾಯ್‌ಮೆಂಟ್‌ ಮಾಡಲು ಡ್ರಗ್ಸ್‌ ತಗೋತೀನಿ ಎನ್ನುವ ರೀತಿಯಲ್ಲಿ ವಿಕಾಸ್‌ ಹಾಗೂ ಅವರ ಸ್ನೇಹಿತ ವಿಡಿಯೋ ಮಾಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದರು.

ಇದನ್ನು ಗಮನಿಸಿದ ಪೊಲೀಸರು ಕೂಡಲೇ ವಿಕಾಸ್‌ಗೆ ಕರೆ ಮಾಡಿ ಆ ವಿಡಿಯೋವನ್ನು ತೆಗೆಸಿದ್ದಾರೆ. ಅಲ್ಲದೇ ಮತ್ತೆ ಎಂದು ಈ ರೀತಿಯ ವಿಡಿಯೋ ಮಾಡದಂತೆ ಸೂಚನೆ ಕೊಟ್ಟಿದ್ದಾರೆ.

 

Tags:
error: Content is protected !!