ಬೆಂಗಳೂರು: ಕನ್ನಡದ ಹಿರಿಯ ನಿರೂಪಕಿ ಅಪರ್ಣ ಅಂತ್ಯಸಂಸ್ಕಾರ ವಿಧಿವಿಧಾನಗಳು ಪೊಲೀಸ್ ಗೌರವ ಸಮರ್ಪಣೆಯಾಗಿದೆ. ಪೊಲೀಸ್ ಗೌರವದ ಮೂಲಕ ಸರ್ಕಾರಿ ಗೌರವವನ್ನ ಸಲ್ಲಿಕೆ ಮಾಡಲಾಗಿದೆ.
ನಗರದ ಬನಶಂಕರಿ ಚಿತಗಾರದಲ್ಲಿ ಪೊಲೀಸ್ ಗೌರವ ಅರ್ಪಿಸಲಾಗಿದೆ. ಪೊಲೀಸ್ ಗೌರವ ಮುಕ್ತಾಯವಾದ ಬಳಿಕ ಅವರ ಕುಟುಂಬದ ಸಂಪ್ರದಾಯದಂತೆ ನೇರವಾಗಿ ಮೃತದೇಹವನ್ನು ವಿದ್ಯುತ್ ಚಿತಾಗಾರದ ಒಳಗಡೆ ತರಲಾಯಿತು. ಇಲ್ಲಿ ಪುರೋಹಿತರು ಪೂಜೆ ಪುರಸ್ಕಾರ ನೇರವೆರಿಸಿ, ಬಳಿಕ ಮೃತದೇಹವನ್ನು ವಿದ್ಯುತ್ ಚಿತೆಯ ಒಳಕ್ಕೆ ಇಳಿಸಲಾಗುತ್ತದೆ.
ಕನ್ನಡದಲ್ಲಿ ಸುಮಾರು 80 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಿಕೊಟ್ಟಿದ್ದ ಖ್ಯಾತ ಅಪರ್ಣಾಗೆ ಸಲ್ಲುತ್ತದೆ.