Mysore
20
mist

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಶಿವಾಜಿನಗರದಲ್ಲಿದ್ದ ಹಸಿರು ಧ್ವಜ ತೆರವುಗೊಳಿಸಿ ರಾಷ್ಟ್ರ ಧ್ವಜ ಹಾರಿಸಿದ ಪೊಲೀಸರು

ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ ಬೆನ್ನಲ್ಲೇ ರಾಜ್ಯದ ವಿವಿಧೆಡೆ ಧ್ವಜ ಯುದ್ಧ ಶುರುವಾದಂತಿದೆ. ನಿನ್ನೆ ( ಜನವರಿ 29 ) ಈ ಸಂಬಂಧ ಮಂಡ್ಯದಲ್ಲಿ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರ ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಹಿಂದೂಪರ ಸಂಘಟನೆಗಳ ಜತೆಗೂಡಿ ಪ್ರತಿಭಟನೆ ನಡೆಸಿದ್ದರು. 

ಇದಾದ ಬೆನ್ನಲ್ಲೇ ರಾಜ್ಯದ ವಿವಿಧ ಸ್ಥಳಗಳಲ್ಲಿ ಹಾರುತ್ತಿರುವ ಬಾವುಟಗಳ ವಿರುದ್ಧ ಹಿಂದೂಪರ ಕಾರ್ಯರ್ತರು ದನಿ ಎತ್ತಿದ್ದಾರೆ. ಕೆರಗೋಡಿನಲ್ಲಿ ಹನುಮ ಧ್ವಜದ ಬದಲು ರಾಷ್ಟ್ರಧ್ವಜ ಹಾರಿಸಿ ʼಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರಧ್ವಜದ ಬದಲು ಯಾವುದೇ ಧಾರ್ಮಿಕ ಧ್ವಜ ಹಾರಿಸುವಂತಿಲ್ಲʼ ಎಂದು ಕಾಂಗ್ರೆಸ್‌ನ ಹಲವರು ಹೇಳಿದ್ದರು. ಹಾಗಿದ್ದರೆ ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್‌ನಲ್ಲಿರುವ ಹಸಿರು ಧ್ವಜಕ್ಕೆ ಅನುಮತಿ ಹೇಗೆ ಸಿಕ್ಕಿತು ಎಂದು ಪ್ರಶ್ನೆಯನ್ನು ಹಾಕಿದ್ದರು.

ಹೀಗೆ ಸಾಮಾಜಿಕ ಜಾಲತಾಣದಲ್ಲಿ ಈ ಧ್ವಜದ ಕುರಿತು ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ಹಸಿರು ಧ್ವಜವನ್ನು ತೆರವುಗೊಳಿಸಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಸದ್ಯ ಚಾಂದಿನಿ ಚೌಕ್‌ನಲ್ಲಿ ತ್ರಿರಂಗ ಹಾರುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!