Mysore
15
clear sky

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಿನಿ ಪಾಕಿಸ್ತಾನ ತಾಯಾರಾಗುತ್ತಿದೆ. ಇಲ್ಲಿ ತಾಲಿಬಾನ್ ಪರ ಆಡಳಿತ ನಡೆಯುತ್ತಿದೆ. ಪೊಲೀಸರು ಸರ್ಕಾರದೊಂದಿಗೆ ಶಾಮೀಲಾಗಿ ಸಿ.ಟಿ.ರವಿಯವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ. ಒಂದು ವೇಳೆ ಅವರ ಜೀವಕ್ಕೆ ತೊಂದರೆಯಾದರೆ ಅದಕ್ಕೆ ಪೊಲೀಸರೇ ಕಾರಣ ಎಂದು ಎಚ್ಚರಿಕೆ ಕೊಟ್ಟರು.

ಸಿ.ಟಿ.ರವಿಯನ್ನು ಕೊಲೆ ಮಾಡುವ ಉದ್ದೇಶದಿಂದಲೇ ಕೆಲವು ಗೂಂಡಾಗಳು ಸುವರ್ಣಸೌಧಕ್ಕೆ ಬಂದಿದ್ದರು. ಇವರ ಜೊತೆ ಪೊಲೀಸರು ಶಾಮೀಲಾಗಿದ್ದಾರೆ. ನಾವು ದೂರು ಕೊಟ್ಟರೆ ಸ್ವೀಕಾರ ಮಾಡುವುದಿಲ್ಲ. ಅದೇ ಸಚಿವರ ಕಡೆ ದೂರು ನೀಡಿದರೆ ಕ್ಷಣಾರ್ಧದಲ್ಲೇ ದೂರು ದಾಖಲಾಗಿ ಎಫ್‌ಐಆರ್ ಆಗುತ್ತದೆ. ಇದನ್ನು ಪ್ರಜಾಪ್ರಭುತ್ವ ಸರ್ಕಾರ ಎನ್ನಬೇಕೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರು ಎಷ್ಟು ದುರಾಹಂಕಾರಿಗಳು ಎಂದರೆ, ಅವರು ಸಮವಸ್ತ್ರದ ಬದಲು ಕಾಂಗ್ರೆಸ್ ಪಕ್ಷದ ಸಮವಸ್ತ್ರ ಹಾಕಿದರೆ ಒಳ್ಳೆುಯದು. ಇವರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೇ ವಿನಃ ಸರ್ಕಾರದ ಕೈಗೊಂಬೆಯಂತೆ ವರ್ತಿಸಬಾರದು ಎಂದು ಹೇಳಿದರು.

ಸಿ.ಟಿ.ರವಿ ಮೇಲೆ ದೌರ್ಜನ್ಯ ವಾಡಿದ್ದಾರೆ. ಅವರು ಏಕಾಂಗಿಯಲ್ಲ. ಇಡೀ ಪಕ್ಷವೇ ಅವರ ಹಿಂದೆ ಇರುತ್ತದೆ. ಮುಂದೊಂದು ದಿನ ಈ ಪ್ರಕರಣ ನಿಮಗೆ ತಿರುಗುಬಾಣವಾಗಲಿದೆ ಎಂದು ಅಶೋಕ್ ಕಾಂಗ್ರೆಸ್‌ಗೆ ಎಚ್ಚರಿಕೆ ಕೊಟ್ಟರು.
ನ್ಯಾಯಾಲಯ ಡಿ.ಕೆ.ಶಿವಕುವಾರ್ ಅವರ ದಾಖಲೆಗಳನ್ನು ಕೇಳುವುದಿಲ್ಲ. ಸದನದಲ್ಲಿ ನಡೆದಿರುವ ದಾಖಲೆಗಳನ್ನು ಪರಿಶೀಲಿಸುತ್ತದೆ. ಬರವಣಿಗೆ ರೆಕಾರ್ಡ್ ಕೂಡ ಆಗುತ್ತದೆ. ಜೊತೆಗೆ ಮೊಬೈಲ್ ರೆಕಾರ್ಡ್ ಮಾಡಲು ಅವಕಾಶವಿರುವುದಿಲ್ಲ. ಇದನ್ನೆಲ್ಲಾ ಪರಿಶೀಲಿಸಿ ಸಭಾಪತಿಗಳು ರೂಲಿಂಗ್ ಕೊಟ್ಟಿದ್ದಾರೆ. ಆದರೂ ಕಾಂಗ್ರೆಸ್ ನಾಯಕರು ತಾವು ಮಾಡಿದ್ದೇ ಸರಿ ಎಂದು ಹೇಳುತ್ತಿದ್ದಾರೆ. ಇದರ ಪ್ರತಿಫಲ ಅನುಭವಿಸುತ್ತೀರಿ ಎಂದು ಎಚ್ಚರಿಸಿದರು.

 

Tags:
error: Content is protected !!