ರಾಮಜನ್ಮಭೂಮಿ ಅಯೋಧ್ಯೆಯ ರಾಮಮಂದಿರದಲ್ಲಿ ಇಂದು ( ಜನವರಿ 22 ) ಬಾಲರಾಮ ಪ್ರಾಣಪ್ರತಿಷ್ಠಾಪನೆ ಕಾರ್ಯ ನಡೆಯುತ್ತಿದ್ದು, ರಾಮಭಕ್ತರ ಹಲವು ವರ್ಷಗಳ ಕನಸು ನನಸಾಗಿದೆ.
ಅಯೋಧ್ಯೆಯಲ್ಲಿ ಬೃಹತ್ ಹಬ್ಬದ ವಾತಾವರಣವಿದ್ದು, ದೇಶದಾದ್ಯಂತ ಈ ಐತಿಹಾಸಿಕ ದಿನವನ್ನು ಸಂಭ್ರಮಿಸುತ್ತಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ರಾಮಮಂದಿರದ ಫೋಟೊ ಎಡಿಟ್ ಮಾಡಿದ ಕಿಡಿಗೇಡಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ತೌಜುದ್ದೀನ್ ದಫೇದಾರ್ ಎಂಬಾತ ರಾಮಮಂದಿರದ ಮೇಲೆ ಪಾಕಿಸ್ತಾನದ ಧ್ವಜ ಇರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕೆಳಗೆ ʼಬಾಬ್ರಿ ಮಸೀದಿʼ ಎಂದು ಬರೆದುಕೊಂಡಿದ್ದಾನೆ.