ಬೆಂಗಳೂರು : ಈಗಾಗಲೇ 295 ಕೋಟಿ ಮಹಿಳೆಯರು ಕರ್ನಾಟಕ ಸಾರಿಗೆ ಇಲಾಖೆಯ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ.
ಈ ನಡುವಲ್ಲೇ ಸರಕಾರ ಮಹಿಳೆಯರಿಗಾಗಿ ಮತ್ತೊಂದು ಗುಡ್‌ನ್ಯೂಸ್ ಕೊಟ್ಟಿದೆ.
ಈ ಯೋಜನೆಯ ಮೂಲಕ ಕರ್ನಾಟಕ ಸಾರಿಗೆ ಇಲಾಖೆಯ ನಾಲ್ಕು ವಿಭಾಗದಲ್ಲಿನ ಸಾಮಾನ್ಯ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಹೌದು, ಕರ್ನಾಟಕ ರಾಜ್ಯದಲ್ಲಿ ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆಯಲ್ಲಿ ಬಾರೀ ಏರಿಕೆ ಕಂಡಿದೆ. ಇದೇ ಕಾರಣದಿಂದಲೇ ರಾಜ್ಯ ಸರಕಾರ ಹೊಸ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದೆ.
ಸರಕಾರಿ ಬಸ್ಸುಗಳಲ್ಲಿ ನೂಕು ನುಗ್ಗಲು ತಪ್ಪಿಸುವ ಸಲುವಾಗಿಯೇ ಕರ್ನಾಟಕದಲ್ಲಿ ಇನ್ಮುಂದೆ ಮಹಿಳೆಯರಿಗೆ ಪ್ರತ್ಯೇಕ ಬಸ್ ರಸ್ತೆಗೆ ಇಳಿಯಲಿವೆ. ಬಿಎಂಟಿಸಿ ಈಗಾಗಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಬಸ್ಸುಗಳನ್ನು ರಸ್ತೆ ಇಳಿಸಿದೆ.
ರಾಜ್ಯ ಸರಕಾರ ಈಗಾಗಲೇ ಸಾವಿರಕ್ಕೂ ಅಧಿಕ ಹೊಸ ಬಸ್ಸುಗಳನ್ನು ಬುಕ್ ಮಾಡಿದ್ದು, ಮುಂದೆ ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಮಹಿಳೆಯರು ಪ್ರತ್ಯೇಕವಾಗಿ ಪ್ರಯಾಣಿಸಬಹುದಾಗಿದೆ.
ಈಗಾಗಲೇ ಪಿಂಕ್ ಬಸ್ ಯೋಜನೆ ರಾಜ್ಯದಲ್ಲಿ ಜಾರಿಗೆ ಬಂದಿದೆ. ಇದೀಗ ಸರಕಾರ ಮಹಿಳೆಯರಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಜಾರಿ ಮಾಡಲು ಮುಂದಾಗಿರುವುದರ ಬೆನ್ನಲ್ಲೇ ಮಹಿಳೆಯರ ಬಸ್ಸುಗಳು ಪಿಂಕ್ ಬಣ್ಣಕ್ಕೆ ತಿರುಗಲಿವೆ. ಸರಕಾರ ಈಗಾಗಲೇ ಪಿಂಕ್ ಬಸ್‌ಗಳನ್ನು ಓಡಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ.
ನಿತ್ಯವೂ ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವ ಸುಮಾರು 60 ರಿಂದ 65 ಲಕ್ಷ ಮಹಿಳೆಯರಿಗಾಗಿ ಪಿಂಕ್ ಬಸ್ ರಸ್ತೆ ಇಳಿಯಲಿದೆ. ಇದರಿಂದಾಗಿ ನಿತ್ಯವೂ ಕೆಲಸ ಕಾರ್ಯಕ್ಕೆ ತೆರಳುವ ಮಹಿಳೆಯರು ಆರಾಮದಾಯಕವಾಗಿ ಪ್ರಯಾಣಿಸ ಬಹುದಾಗಿದೆ.





