Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಕನ್ನಡಿಗರ ಆಕ್ರೋಶಕ್ಕೆ ಮಣಿದು ಕ್ಷಮೆಯಾಚಿಸಿದ ಫೋನ್‌ಪೇ ಸಿಇಒ

ಬೆಂಗಳೂರು: ಕರ್ನಾಟಕದಲ್ಲಿ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಸರ್ಕಾರದ ನಿರ್ಧಾರಕ್ಕೆ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದರು. ಈ ಪೈಕಿ ಫೋನ್‌ ಪೇ ಕಂಪನಿ ಸಿಇಒ ಸಮೀರ್‌ ನಿಗಮ್‌ ಕೂಡ ಆಕ್ಷೇಪಿಸಿ ಟ್ವಿಟ್‌ ಮಾಡಿ ತೀವ್ರ ಅಸಮಾಧಾನ ಹೊರಹಾಕಿ, ಕನ್ನಡಿಗರ ಬಗ್ಗೆ ಕುಹುಕವಾಡಿದ್ದರು.

ಹೀಗಾಗಿ ಸಮೀರ್‌ ನಡೆಗೆ ಕನ್ನಡಿಗರು ವ್ಯಾಪಕವಾಗಿ ವಿರೋಧಿಸಿ ಫೋನ್‌ ಪೇ ಬಾಯ್ಕಟ್‌ ಬಿಸಿ ಮುಟ್ಟಿಸಿ, ತಕ್ಷಣ ಕ್ಷಮೆಕೋರುವಂತೆ ಒತ್ತಾಯಿಸಿದ್ದರು. ಅದರಂತೆಯೇ ಇದೀಗ ಕಡೆಗೂ ಕನ್ನಡಿಗರ ಮುಂದೆ ಸಮೀರ್‌ ತಲೆಬಾಗಿದ್ದಾರೆ.

ಈ ಬಗ್ಗೆ ಟ್ವಿಟ್‌ ಮಾಡಿರುವ ಫೋನ್‌ ಪೇ ಸಿಇಒ ಸಮೀರ್‌ ನಿಗಮ್‌, ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ, ಯಾರದ್ದಾದರೂ ಭಾವನೆಗಳಿಗೆ ಧಕ್ಕೆಯಾಗಿದ್ದಾರೆ ಅದಕ್ಕೆ ದಯವಿಟ್ಟು ಕ್ಷಮಿಸಿ, ನಾನು ನಿಜವಾಗಿಯೂ ನಿಮಗೆ ಬೇಷರತ್‌ ಕ್ಷಮೆಯನ್ನು ನೀಡಲು ಬಯಸುತ್ತೇನೆ, ಕರ್ನಾಟಕ, ಕನ್ನಡಿಗರನ್ನು ಅವಮಾನಿಸುವ ಉದ್ದೇಶವಿರಲಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ.

 

Tags: