ಬೆಂಗಳೂರು: ಪಂಚೆ ತೊಟ್ಟಿದ್ದಕ್ಕೆ ಬೆಂಗಳೂರಿನ ಜಿ.ಟಿ.ಮಾಲ್‌ನಲ್ಲಿ ರೈತನಿಗೆ ಎಂಟ್ರಿ ನಿರಾಕರಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿ.ಟಿ.ಮಾಲ್ ಜನತೆ ಬಳಿ ಕ್ಷಮೆ ಕೇಳಿದೆ.
ಮಾಲ್‌ಗೆ ಸಿನಿಮಾ ನೋಡಲು ಯುವಕನೊಬ್ಬ ತನ್ನ ತಂದೆ ಜೊತೆಗೆ ಬಂದಿದ್ದ. ಆದರೆ ಪಂಚೆ ಹಾಕಿದ ಕಾರಣಕ್ಕಾಗಿ ರೈತ ಮಾಲ್ ಒಳಗೆ ಹೋಗಲು ನಿರಾಕರಣೆ ಮಾಡಲಾಗಿತ್ತು.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕ ವಲಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಎಚ್ಚೆತ್ತ ಜಿ.ಟಿ.ಮಾಲ್, ಜನತೆಯ ಬಳಿ ಕ್ಷಮೆ ಕೇಳಿದೆ.
ಈ ಘಟನೆಗೆ ನಮ್ಮ ಸಿಬ್ಬಂದಿಯ ತಪ್ಪು ತಿಳುವಳಿಕೆ ಕಾರಣವಾಗಿರುತ್ತದೆ. ಇದರಿಂದ ಅವಮಾನ ಆದ ವ್ಯಕ್ತಿಗೆ ನಾವು ಕ್ಷಮೆಯಾಚಿಸುತ್ತೇವೆ. ಈ ರೀತಿಯ ಘಟನೆಗಳು ಮತ್ತೆ ಸಂಭವಿಸದಂತೆ ಜವಾಬ್ದಾರಿ ವಹಿಸುತ್ತೇವೆ. ನಮ್ಮ ಮಾಲ್‌ಗೆ ಎಲ್ಲರಿಗೂ ಸುಸ್ವಾಗತ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.