Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಹಾಲಿನ ಬೆಲೆ ಹೆಚ್ಚು ಮಾಡಿಲ್ಲ, ಪೊಟ್ಟಣದಲ್ಲಿನ ಹೆಚ್ಚುವರಿ ಪ್ರಮಾಣಕ್ಕೆ ಹಣ ನೀಡ್ತಿದ್ದಾರೆ- ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದಲ್ಲಿ ಹಾಲಿನ ಬೆಲೆಯನ್ನು ಹೆಚ್ಚು ಮಾಡಿಲ್ಲ . ಅದರ ಪೊಟ್ಟಣದಲ್ಲಿ ಹೆಚ್ಚಿನ ಪ್ರಮಾಣದ ಹಾಲಿಗೆ ಗ್ರಾಹಕರು ಹಣ ನೀಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾಗರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಹಾಲಿನ ಪೊಟ್ಟಣಗಳಲ್ಲಿ ಒದಗಿಸುತ್ತಿರುವ ಹೆಚ್ಚುವರಿ ಹಾಲಿಗೆ ಗ್ರಾಹಕರಿಂದ ಹಣ ಪಡೆಯಲಾಗುತ್ತಿದೆ. ಮತ್ತು ಆ ಹಣ ನೇರವಾಗಿ ರೈತರಿಗೆ ಹೋಗುತ್ತದೆ ಎಂದರು.

ಅಲ್ಲದೆ ಹಾಲು ಉತ್ಪಾದಕರಿಗೆ ೨ ರೂ ಇದ್ದ ಸಬ್ಸಿಡಿ ಯನ್ನ ೫ ರೂ ಗೆ ಹೆಚ್ಚಿಸಿದ್ದು ನಾನು, ಆರ್‌ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್ ಮಾಹಿತಿ ಇಲ್ಲದೆ ಹೇಳಿಕೆಗಳನ್ನು ನೀಡುತ್ತಾರೆ. ನಮ್ಮ ಸರ್ಕಾರ ರೈತರಿಗೆ ಪ್ರತಿದಿನ ರೂ 5 ಕೋಟಿ ಪ್ರೋತ್ಸಾ ಹ ಧನ ನೀಡುತ್ತಿದೆ ಅದು ತಿಂಗಳಿಗೆ ₹ 150 ಕೋಟಿ ಮತ್ತು ವರ್ಷಕ್ಕೆ ₹ 1800 ಕೋಟಿ ಆಗುತ್ತದೆ ಎಂದು ಹೇಳಿದರು. ಇದೇ ವೇಳೆ ಮಾಧ್ಯಮದವರು ಸರ್ಕಾರ ರೈತರ ಸಬ್ಸಿಡಿ ಬಾಕಿ ಉಳಿಸಿಕೊಂಡಿದೆಯಲ್ಲಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಅದು ನಾವು ಉಳಿಸಿಕೊಂಡಿರೋದು ಅಲ್ಲ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ₹700 ಕೋಟಿ ಬಾಕಿಯುಳಿಸಿಕೊಂಡಿತ್ತು ಅದನ್ನು ನಮ್ಮ ಸರ್ಕಾರ ಚುಕ್ತಾ ಮಾಡುತ್ತಿದೆ ಎಂದು ಹೇಳಿದರು

Tags: