Mysore
19
few clouds

Social Media

ಸೋಮವಾರ, 04 ನವೆಂಬರ್ 2024
Light
Dark

ಪೆನ್‌ಡ್ರೈವ್‌ ಪ್ರಕರಣ: ʼಕೈʼ ನಾಯಕರ ವಿರುದ್ಧ ಟ್ವಿಟ್ಟರ್‌ ವಾರ್‌ ನಡೆಸಿರುವ ಜಾ.ದಳ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ-ದಿನೇ ರಾಜ್ಯ ರಾಜಕೀಯದಲ್ಲಿ ಹೊಸ-ಹೊಸ ವಿಷಯಗಳು ಹೊರಬುರುತ್ತಲೇ ಇವೆ.

ಇದೇ ಪ್ರಕರಣದಲ್ಲಿ ಬಂಧಿಯಾಗಿರುವ ವಕೀಲ ದೇವರಾಜೇಗೌಡರು ಡಿಸಿಎಂ ಡಿಕೆ ಶಿವಕುಮಾರ್‌ ಮೇಲೆ 100 ಕೋಟಿ ರೂ. ಆರೋಪ ಮಾಡಿದ ಬೆನ್ನಲ್ಲೇ ಜಾ.ದಳ ತಮ್ಮ ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್‌ ನಾಯಕರ ವಿರುದ್ಧ ಕೆಂಡಕಾರಿದ್ದಾರೆ.

ದೇವರಾಜೇಗೌಡರ ಹೇಳಿಕೆ ಬೆನ್ನಲ್ಲೇ ಉಳಿದ ನಾಲ್ಕು ಜನರ ಹೆಸರನ್ನು ಜಾ.ದಳ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಬಹಿರಂಗಗೊಳಿಸಿದೆ. ಇದೊಂದು ಸಿಡಿ ಶಿವಕುಮಾರ್‌ ಪೆನ್‌ಡ್ರೈವ್‌ ಗ್ಯಾಂಗ್‌ ಆಗಿದ್ದು, ೧. ಡಿಸಿಎಂ ಡಿಕೆ ಶಿವಕುಮಾರ್‌, ೨. ಕೃಷಿ ಸಚಿವ ಚೆಲುವರಾಯಸ್ವಾಮಿ, ೩. ಕಂದಾಯ ಸಚಿವ ಕೃಷ್ಣಭೈರೇಗೌಡ, ೪. ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, + ಇನ್ನೂ ಒಬ್ಬ ಸಚಿವ, ಮಾಜಿ ಸಂಸದ ಎಲ್‌.ಆರ್‌ ಶಿವರಾಮೇಗೌಡ ಎಂದು ಆರೋಪ ಮಾಡಿದ್ದಾರೆ.

ಮುಂದುವರೆದು ಇವರೆಲ್ಲರೂ ಹೊರಡಿಸಿರುವ ಸಂಚು ಏ ಗೊತ್ತಾ? ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರಿಗೆ ಕೆಟ್ಟ ಹೆಸರು ತರುವುದು. ಸಂಚು ಸಾಕಾರಗೊಳಿಸಲು ಸಿಡಿ ಶಿವಕುಮಾರ್‌ ಸಾಹೇಬ್ರು ವಕೀಲರಾ ದೇವರಾಜೇಗೌಡರಿಗೆ ನೀಡಿದ ಆಫ್ರ್‌ ಬರೋಬ್ಬರಿ 100 ಕೋಟಿ ಎಂದು ಬರೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.

https://x.com/JanataDal_S/status/1791476656143814874

ದೇವರಾಜೇಗೌಡ ಆರೋಪವೇನು?

ಪೆನ್‌ಡ್ರೈವ್‌ ತಯಾರಿಸಿದ್ದು, ಡಿಕೆ ಶಿವಕುಮಾರ್‌ ಅವರು, ಇದನ್ನು ಹ್ಯಾಂಡಲ್‌ ಮಾಡಲು ನಾಲ್ಕು ಸಚಿವರ ಸಮಿತಿಯನ್ನು ರಚಿಸಿದರು. ಅಲ್ಲದೇ ಡಿಕಿ ಶಿವಕುಮಾರ್‌ ಪೆನ್‌ಡ್ರೈವ್‌ ಹಂಚಲು ಹೇಳಿದ್ದು ಎಚ್‌ಡಿ ಕುಮಾರಸ್ವಾಮಿ ಎಂದು ಹೇಳಲು ನನಗೆ 100ಕೋಟಿ ರೂ ಆಫರ್‌ ಮಾಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದರು.

Tags: