ಹಾಸನ/ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಪ್ರಿನ್ಸಿಪಲ್ ಸಿ.ಜೆ, ಜೆಎಂಎಫ್‌ಸಿ ನ್ಯಾಯಾಧೀಶರಾದ ಎಸ್. ಸಿದ್ದರಾಮ ಅವರು ಹೊಳೆ ನರಸೀಪುರದ ತಮ್ಮ ನಿವಾಸದಲ್ಲಿ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದ್ದಾರೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಹಿರಿಯೂರು ಬಳಿ ದೇವರಾಜೇಗೌಡನನ್ನು ಬಂಧಿಸಲಾಗಿತ್ತು. ದೇವರಾಜೇಗೌಡ ಮತ್ತೆರೆಡು ಆಡಿಯೋ ರಿಲೀಸ್ ಮಾಡಿದ ಎಂಟೇ ನಿಮಿಷದಲ್ಲಿ ಮೊಬೈಲ್ ಲೊಕೇಷನ್ ಮೂಲಕ ಆತನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ನಿನ್ನೆ ರಾತ್ರಿ ಬಂಧಿಸಿ, ಇಂದು ಹೊಳೆನರಸೀಪುರಕ್ಕೆ ಕರೆತರಲಾಗಿದೆ.
ದೇವರಾಜೇಗೌಡರನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿದ ನಂತರ ಜಡ್ಜ್ ಮುಂದೆ ಹಾಜರುಪಡಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದಾರೆ.
ಇನ್ನು ಇವರ ಬಂಧನಕ್ಕೆ ಬಿಜೆಪಿ ಹಲವು ಮುಂಖಡರು ಆಕೋಶ ಹೊರಹಾಕಿದ್ದಾರೆ. ಬಂಧಿಸದೇ ಇದ್ದಲ್ಲಿ ಸರ್ಕಾರದ ವಿರುದ್ಧ ಹಲವು ವಿಚಾರಗಳು ಹೊರ ಬರುವುದನ್ನು ತಡೆಯಲು ಬಂಧಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.





