Mysore
25
clear sky

Social Media

ಮಂಗಳವಾರ, 24 ಮಾರ್ಚ್ 2026
Light
Dark

ಮಕ್ಕಳ ವೈದ್ಯೆ ಕಿಡ್ನಾಪ್‌: 6 ಕೋಟಿ ರೂ.ಗೆ ಬೇಡಿಕೆ

ಬಳ್ಳಾರಿ: ಜಿಲ್ಲಾ ಆಸ್ಪತ್ರೆಯ ಮಕ್ಕಳ ವೈದ್ಯೆ ಡಾ. ಸುನೀಲ್‌ ಅವರನ್ನು ದರೋಡೆಕೋರರು ಕಾರಿನಲ್ಲಿ ಅಪಹರಿಸಿ 6 ಕೋಟಿ ರೂ. ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ವೈದ್ಯೆ ಸುನೀಲ್‌, ಸತ್ಯನಾರಾಯಣ ಪೇಟೆಯ ಶನೇಶ್ವರ ಗುಡಿ ಬಳಿ ವಾಕಿಂಗ್‌ ಮಾಡುವ ವೇಳೆ ನಂಬರ್‌ ಪ್ಲೇಟ್‌ ಇಲ್ಲದ ಟಾಟಾ ಇಂಡಿಗೋ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಸಿನಿಮಾ ರೀತಿಯಲ್ಲಿ ಬಾಯಿಗೆ ಬಟ್ಟೆ ಹಾಕಿ ಅವರನ್ನು ಅಪಹರಿಸಿದ್ದಾರೆ. ಈ ಸಂಬಂಧ ಕಿಡ್ನಾಪ್‌ ಮಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ವೈದ್ಯೆ ಸುನೀಲ್‌ ಅವರನ್ನು ಕಿಡ್ನಾಪ್‌ ಮಾಡಿರುವ ದುಷ್ಕರ್ಮಿಗಳು ಅವರ ಪೋನಿನಲ್ಲಿಯೇ ಕರೆ ಮಾಡಿ 6 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

 

 

 

 

Tags:
error: Content is protected !!