Mysore
29
clear sky

Social Media

ಗುರುವಾರ, 29 ಜನವರಿ 2026
Light
Dark

ಪಿಡಿಒ ಪರೀಕ್ಷಾರ್ಥಿಗಳ ಬಗ್ಗೆ ಎಫ್‌ಐಆರ್‌ ಪ್ರಕರಣ: ಶಾಸಕ ಯತ್ನಾಳ್‌ ಆಕ್ರೋಶ

ಬೆಂಗಳೂರು: ಪಿ.ಡಿ.ಒ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ತಡವಾಗಿ ಬಂತೆಂದು ಪ್ರತಿಭಟಿಸಿದ ಪರೀಕ್ಷಾರ್ಥಿಗಳ ಮೇಲೆ ಕಾಂಗ್ರೆಸ್ ಸರ್ಕಾರ ಎಫ್.ಐ.ಆರ್ ಹಾಕಿದೆ. ಅದನ್ನು ಹಿಂಪಡೆಯಬೇಕು ಇಲ್ಲವಾದರೆ ಲೋಕ ಸೇವಾ ಆಯೋಗದ ಕಚೇರಿಯ ಮುಂದೆ ಪರೀಕ್ಷಾರ್ಥಿಗಳ ಜೊತೆ ಪ್ರತಿಭಟಿಸುತ್ತೇನೆ ಎಂದು ಶಾಸಕ ಯತ್ನಾಳ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣವಾದ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಸರ್ಕಾರ ಅಧಿಕಾರಿಗಳ ಹಾಗೂ ಲೋಕ ಸೇವಾ ಆಯೋಗದ ತಪ್ಪಿನಿಂದ ಆದ ಪ್ರಮಾದವನ್ನು ಒಪ್ಪಿಕೊಂಡು ಕೇಸ್ ವಾಪಾಸ್ ಪಡೆಯಬೇಕು. ನ್ಯಾಯಯುತವಾಗಿ ಪ್ರತಿಭಟನೆ ಮಾಡಿದ ಪರೀಕ್ಷಾರ್ಥಿಗಳು ಕೇಸ್ ಹಾಕಿಸಿಕೊಂಡು ಪರದಾಡುತ್ತಿದ್ದಾರೆ. ಆದರೆ, ಲೋಕಸೇವಾ ಆಯೋಗದ ಸಮನ್ವಯದ ಕೊರತೆ ಹಾಗೂ ಬೇಜವಾಬ್ದಾರಿಯಿಂದ ಪ್ರಶ್ನೆ ಪತ್ರಿಕೆ 45 ನಿಮಿಷ ತಡವಾಗಿ ಬಂದದ್ದನ್ನು ಕರ್ತವ್ಯನಿರತ ಸಿಬ್ಬಂದಿಗಳೇ ಒಪ್ಪಿಕೊಂಡಿದ್ದಾರೆ. ಅಲ್ಲದೇ ಒಂದು ಪೇಪರ್ ಸೀಲ್ ಮೊದಲೇ ತೆರೆದಿದ್ದು, ಒಂದು ಕವರ್ ನಲ್ಲಿ 24 ಪ್ರಶ್ನೆ ಪತ್ರಿಕೆ ಇರಬೇಕಾದದ್ದು ಕೇವಲ 12 ಇದ್ದದ್ದನ್ನು ಪ್ರತ್ಯಕ್ಷ ಸಾಕ್ಷಿಗಳು ನೋಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಕರ್ನಾಟಕ ಲೋಕಸೇವಾ ಆಯೋಗ (KPSC) ಒಂದರ ಮೇಲೊಂದು ಲೋಪಗಳನ್ನು ಎಸಗುತ್ತಾ ಪರೀಕ್ಷಾರ್ಥಿಗಳ ಭವಿಷ್ಯವನ್ನು ಹಾಳು ಮಾಡುವುದಲ್ಲದೆ ಅವರ ಮೇಲೆ ಸುಳ್ಳು ಕೇಸು ದಾಖಲಿಸಿ ಕೋರ್ಟು ಕಚೇರಿ ಅಲೆಯುವಂತೆ ಮಾಡುತ್ತಿರುವುದು ಇವರ ಬೇಜವಾಬ್ದಾರಿ, ಅಸಮರ್ಥತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಿಡಿಕಾರಿದ್ದಾರೆ.

Tags:
error: Content is protected !!