Mysore
22
haze

Social Media

ಭಾನುವಾರ, 14 ಡಿಸೆಂಬರ್ 2025
Light
Dark

PDO ಪರೀಕ್ಷೆ| ಅಭ್ಯರ್ಥಿಗಳಿಗೆ ತಲುಪದ ಪೂರ್ಣ ಪ್ರಶ್ನೆ ಪ್ರತ್ರಿಕೆ; ಪ್ರತಿಭಟನೆ

ರಾಯಚೂರು: ಕೆಪಿಎಸ್‌ಸಿ ವಿರುದ್ಧ ಒಂದಲ್ಲ ಒಂದು ಆರೋಪಗಳು ಕೇಳಿ ಬರುತ್ತಲೇ ಇವೆ. ಸರಿಯಾಗಿ ಪ್ರಶ್ನೆ ಪತ್ರಿಕೆ ತಯಾರಿಸುತ್ತಿಲ್ಲ. ಪದೇ ಪದೇ ಮರುಕಳಿಸುವ ತಪ್ಪು ಭಾಷಾಂತರಗಳು ಎನ್ನುವ ಆರೋಪಗಳು ಕೇಳಿಬರುತ್ತಿದೆ. ಈ ಮಧ್ಯ ಇದೀಗ  ಪಿಡಿಒ ಪರೀಕ್ಷೆಯಲ್ಲೂ ಸಹ ಕೆಪಿಎಸ್‌ಸಿ ಪರೀಕ್ಷಾ ಮಂಡಳಿ ಎಡವಟ್ಟು ಮಾಡಿಕೊಂಡಿದ್ದು, ಪರೀಕ್ಷೆ ಬರೆಯಲು ಬಂದಿರುವ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ತಲುಪಿಸದೆ ಎಡವಟ್ಟು ಮಾಡಿದೆ.

ರಾಯಚೂರಿನ ಸಿಂಧನೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆಯಬೇಕಿದ್ದ ಪಿಡಿಒ ಪರೀಕ್ಷೆಗೆ ಹಾಜರಾಗಿದ್ದ 830 ಅಭ್ಯರ್ಥಿಗಳ ಪೈಕಿ 818 ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆಯನ್ನೇ ಕೊಡದ ಕಾರಣ ಪರೀಕ್ಷಾರ್ಥಿಗಳು ದಿಢೀರ್‌ ಪ್ರತಿಭಟನೆ ನಡೆಸಿದ್ದಾರೆ.

ಪರೀಕ್ಷಾರ್ಥಿಗಳು ಕೆಪಿಎಸ್‌ಸಿ ಪರೀಕ್ಷಾ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಎಸ್‌ಸಿಯು ಪ್ರತಿ ಬಾರಿ ಒಂದಿಲ್ಲೊಂದು ಎಡವಟ್ಟು ಮಾಡುತ್ತಿದೆ. ಒಂದು ಪರೀಕ್ಷಾ ಕೊಠಡಿಯಲ್ಲಿ 12 ಅಭ್ಯರ್ಥಿಗಳಿಗೆ ಮಾತ್ರ ಪ್ರಶ್ನೆ ಪತ್ರಿಕೆ ಕೊಡಲಾಗಿತ್ತು. ಇದರಿಂದ ಉಳಿದವರು ಆಕ್ರೋಶ ವ್ಯಕ್ತಪಡಿಸಿ, ಪ್ರಶ್ನೆ ಪತ್ರಿಕೆ ಸಿಗುವವರಿಗೂ ಪರೀಕ್ಷೆ ಬರೆಯದಂತೆ ತಾಕೀತು ಮಾಡಿದ್ದಾರೆ. ಉಳಿದವರಿಗೆ 45 ನಿಮಿಷ ಆದರೂ ಪ್ರಶ್ನೆ ಪತ್ರಿಕೆ ಕೊಡದಿದ್ದಾಗ ಅಭ್ಯರ್ಥಿಗಳು ಘೋಷಣೆಗಳನ್ನು ಕೂಗತ್ತ ಕೊಠಡಿಯಿಂದ ಹೊರ ನಡೆದರು.

ಬಳಿಕ ರಾಯಚೂರು-ಕಷ್ಠರಿ ಹೆದ್ದಾರಿ ರಸ್ತೆಯ ಮೇಲೆ ಕುಳಿತು ರಸ್ತೆ ತಡೆ ನಡೆಸಿದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸ್ ಹಾಗೂ ತಹಶೀಲ್ದಾರ್ ಅರುಣ್ ಕುಮಾರ್​ ಅಭ್ಯರ್ಥಿಗಳ ಮನವೊಲಿಸುವ ಪ್ರಯತ್ನ ಮಾಡಿದರು. ಗೊಂದಲ ನಿವಾರಣೆಗೆ ಪ್ರಯತ್ನ ಮಾಡಿದರೂ ಅಭ್ಯರ್ಥಿಗಳು ಕೆಪಿಎಸ್‌ಸಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Tags:
error: Content is protected !!