Mysore
20
overcast clouds

Social Media

ಗುರುವಾರ, 26 ಡಿಸೆಂಬರ್ 2024
Light
Dark

ಆಂಧ್ರದಲ್ಲಿ ಪವನ್‌ಕಲ್ಯಾಣ್‌ಗೆ ಡಿಸಿಎಂ ಪಟ್ಟ

ಅಮರಾವತಿ: ಆಂಧ್ರಪ್ರದೇಶದ ನೂತನ ಉಪ ಮುಖ್ಯಮಂತ್ರಿ ಜನಸೇನಾ ಮುಖ್ಯಸ್ಥ ಪವನ್‌ ಕಲ್ಯಾಣ್‌ ಅವರು ಶುಕ್ರವಾರ ಅಧಿಕಾರಿ ಸ್ವೀಕರಿಸಿದರು.

ಪವನ್‌ಕಲ್ಯಾಣ್‌ ಅವರು ಆಂಧ್ರಪ್ರದೇಶದಲ್ಲಿ ತಮ್ಮ ಜನಸೇನಾ ಪಕ್ಷವನ್ನು ಸಂಘಟಿಸವು ಜೊತೆಗೆ ಬಿಜೆಪಿ ಹಾಗೂ ಟಿಡಿಪಿಯನ್ನೂ ಒಗ್ಗೂಡಿಸಿ ಎನ್‌ಡಿಎ ಸರ್ಕಾರಕ್ಕೆ ಭಾರೀ ಬಹುಮತ ಬರುವಲ್ಲಿ ಶ್ರಮಿಸಿದ್ದರು.

ಪವನ್‌ ಕಲ್ಯಾಣ್‌ ಅವರಿಗೆ ಡಿಸಿಎಂ ಪಟ್ಟದ ಜೊತೆಗೆ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌, ಪರಿಸರ, ಅರಣ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ನೀಡಲಾಗಿದೆ.

2024 ರ ವಿಧಾನಸಭಾ ಚುನಾವಣೆಯಲ್ಲಿ ಪವನ್‌ ಕಲ್ಯಾನ್‌ ಅವರ ಜನಸೇನಾ ಪಕ್ಷ ಸ್ಪರ್ಧಿಸಿದ್ದ ಎಲ್ಲ 21 ಕ್ಷೇತ್ರ ಹಾಗೂ 2 ಲೋಕಸಭೆ ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು.

Tags: