Mysore
15
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಪೋಕ್ಸೋ ಪ್ರಕರಣ: ಬಿಎಸ್‌ವೈ ಬಂಧನ ಕುರಿತು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಿಷ್ಟು?

ಬೆಂಗಳೂರು: 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಡಿ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರಿಗೆ ವಾರೆಂಟ್‌ ಜಾರಿಯಾಗಿದೆ.

ಈ ಬೆನ್ನಲ್ಲೇ ಇಂದು (ಶುಕ್ರವಾರ, ಜೂನ್‌.14) ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಜ್ಯ ಗೃಹಸ ಸಚಿವ ಡಾ. ಜಿ ಪರಮೇಶ್ವರ್‌ ಅವರು, ಮಾಜಿ ಸಿಎಂ ಯಡಿಯೂರಪ್ಪನವರು ಆದಷ್ಟು ಬೇಗ ಬಂದರೆ ಒಳ್ಳೆಯದು, ಇಲ್ಲವಾದಲ್ಲಿ ಪೊಲೀಸರೇ ಕರೆದುಕೊಂಡು ಬರುತ್ತಾರೆ ಎಂದು ಹೇಳಿದ್ದಾರೆ.

ಬಿಎಸ್‌ವೈ ಅವರ ವಿರುದ್ಧ ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್‌ ನೀಡಲಾಗಿದೆ. ಅವರ ಬಳಿ ಪೊಲೀಸರು ಮಾಹಿತಿ ಪಡೆಯಲಿದ್ದಾರೆ ಬಳಿಕ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಿದ್ದಾರೆ. ಸದ್ಯ ದಹಲಿಯಲ್ಲಿರುವ ಬಿಎಸ್‌ವೈ ಅವರು ಸೋಮವಾರ ಬರೋದಾಗಿ ಹೇಳಿದ್ದಾರೆ ಎಂದರು.

ರಾಹುಲ್‌ ಗಾಂಧಿಯವರನ್ನು ಜಾಹೀರಾತು ಪ್ರಕರಣದಲ್ಲಿ ಕೋರ್ಟ್‌ ಮೆಟ್ಟಿಲು ಹತ್ತಿಸಿದ್ದಕ್ಕಾಗಿ ಕಾಂಗ್ರೆಸ್‌ ಬಿಎಸ್‌ವೈ ವಿರುದ್ಧ ಷಡ್ಯಂತರ ರೂಪಿಸುತ್ತಿದೆ ಎಂದು ಬಿಜೆಪಿ ದೂರಿರುವ ಸಂಬಂಧ. ಅವರು ಸುಮ್ಮನೇ ಕಥೆ ಕಟ್ಟುತ್ತಾರೆ. ಈ ವಿಚಾರಕ್ಕೂ ರಾಹುಲ್‌ ಗಾಂಧಿಗೂ ಏನು ಸಂಬಂಧ ಹೇಳಿ? ಈ ಪ್ರಕರಣದಲ್ಲಿ ರಾಹುಲ್‌ ಪಾತ್ರವೇನು ಇಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ನಟ ದರ್ಶನ್‌ಗೆ ಠಾಣೆಯಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಕ್ಕೆ, ಯಾರಿಗೂ ಯಾವುದೇ ರಾಜಾತಿಥ್ಯ ನೀಡಿಲ್ಲ. ತನಿಖೆ ಮಾಡಲು ನಾವು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದರು. ಜತೆಗೆ ಬಿರಿಯಾನಿ ನೀಡಿದ ವಿಷಯಕ್ಕೆ ನಾವು ಎಲ್ಲರನ್ನು ಆರೋಪಿಗಳನ್ನಾಗಿಯೇ ನೋಡಿದ್ದೇವೆ, ಯಾರಿಗೂ ಬಿರಿಯಾನಿ ನೀಡಿಲ್ಲ ಎಂದಿದ್ದಾರೆ, ವಿಚಾರಣೆ ವಿಚಾರದಲ್ಲಿ ನಮಗೆ ಯಾವುದರ ಬಗೆಯೂ ಮುಲಾಜಿಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದರು.

Tags:
error: Content is protected !!