Mysore
21
mist

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಮೂರನೇ ಅವಧಿಗೆ ಪ್ರಧಾನಿಯಾಗುತ್ತಿರುವ ಮೋದಿ ಅವರಿಗೆ ಅಭಿನಂದನೆ: ಪರಮೇಶ್ವರ್‌

ಬೆಂಗಳೂರು: ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ಬಳಿಕ ಮೊದಲ ಬಾರಿಗೆ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿಲಿರುವ ನರೇಂದ್ರ ಮೋದಿ ಅವರಿಗೆ ರಾಜ್ಯ ಗೃಹಸಚಿವ ಡಾ. ಜಿ ಪರಮೇಶ್ವರ್‌ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ಮೋದಿ ಅವರಿಗೆ ಅಭಿನಂದನೆಗಳು. ಕಳೆದ 10 ವರ್ಷಗಳ ಬಿಜೆಪಿ ಅವಧಿಯಲ್ಲಿ ಜನರು ಸಾಕಷ್ಟು ತೊಂದರೆಗಳಿಗೆ ಈಡಾಗಿದ್ದಾರೆ. ಹಿಂದೆ ಏನೆಲ್ಲಾ ತಪ್ಪುಗಳನ್ನು ಮಾಡಿದ್ದಾರೆ ಎಂಬುದನ್ನು ಸರಿಪಡಿಸಿಕೊಳ್ಳುವ ಮೂಲಕ ಜನರ ದೃಷ್ಠಿಯಿಂದ ಕೆಲಸ ಮಾಡಬೇಕು. ಕರ್ನಾಟಕದ ಮಂತ್ರಿಗಳಿಗೆ ಹೆಚ್ಚಿನಸ ಸ್ಥಾನಮಾನ ಸಿಗುವಂತಾಗಬೇಕು.

ಈ ಹಿಂದೆ ರಾಜ್ಯದಿಂದ ಆಯ್ಕೆಯಾಗಿದ್ದ ನಿರ್ಮಲಾ ಸೀತಾರಾಮನ್‌ ಸೇರಿ ಎಲ್ಲರೂ ವಿಫಲರಾಗಿದ್ದಾರೆ. ಅದು ಆಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯದಿಂದ ಹಲವು ಜನರು ಸಚಿವ ಸ್ಥಾನ ನಿರೀಕ್ಷೆಯಲಿದ್ದಾರೆ. ಈವರೆಗೆ ರಾಜ್ಯದಿಂದ ನೇಮಕಗೊಂಡ ಸಂಸದರು ರಾಜ್ಯದ ಹಿತ ಕಾಪಾಡುವಲ್ಲಿ ವಿಫಲಾಗಿದ್ದಾರೆ. ಬಿಜೆಪಿ ಸಂಸದರು ಯಾರು ಕೂಡಾ ಧನಿ ಎತ್ತಲಿಲ್ಲ. ನಮ್ಮ ನಿರೀಕ್ಷೆಯಂತೆ ಜನಪರ ಆಡಳಿತ ನೀಡಲಿ ಎಂದು ಅವರು ಆಶಿಸಿದರು.

Tags:
error: Content is protected !!