Mysore
16
clear sky

Social Media

ಶುಕ್ರವಾರ, 13 ಫೆಬ್ರವರಿ 2026
Light
Dark

ರಸ್ತೆ ತಡೆದು ಪಂಜಿನ ಮೆರವಣಿಗೆ: ನಲಪಾಡ್‌ ಸೇರಿ ೨೫ ಮಂದಿ ವಿರುದ್ಧ ಕೇಸ್‌!

ಬೆಂಗಳೂರು : ರಸ್ತೆ ಸಂಚಾರ ತಡೆದು ಪಂಜಿನ ಮೆರವಣಿಗೆ ನಡೆಸಿದ ಆರೋಪದ ಹಿನ್ನೆಲೆ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ಸೇರಿ 25 ಮಂದಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಅಸ್ಸಾಂ ನಲ್ಲಿ ಕಾಂಗ್ರೆಸ್ ಜೋಡೋ ನ್ಯಾಯ ಯಾತ್ರೆಗೆ ತಡೆ ನೀಡಿದ್ದನ್ನು ವಿರೋಧಿಸಿ ಬೆಂಗಳೂರಿನ ಕಾಂಗ್ರೆಸ್ ಭವನದ ಬಳಿ ನಲಪಾಡ್ ಮತ್ತು ಟೀಂ ನ ಧರಣಿ ನಡೆಸಿದ್ದರು.

ಪಂಜಿನ ಮೆರವಣಿಗೆ ನಡೆಸಿ ರಸ್ತೆ ಸಂಚಾರಕ್ಕೆ ತಡೆಯೊಡ್ಡಿದ ಹಿನ್ನೆಲೆ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡಿದ ಹಿನ್ನೆಲೆ ಹೈಗ್ರೌಂಡ್ಸ್ ಠಾಣೆಯಲ್ಲಿ ನಲಪಾಡ್ ಸೇರಿ 25 ಮಂದಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!