Mysore
25
scattered clouds

Social Media

ಭಾನುವಾರ, 05 ಏಪ್ರಿಲ 2026
Light
Dark

ಅರಮನೆ ಮೈದಾನ ವಿವಾದ : ಆ.18ಕ್ಕೆ ಸುಪ್ರೀಂ ವಿಚಾರಣೆ

ಹೊಸದಿಲ್ಲಿ : ಬೆಂಗಳೂರು ಅರಮನೆ ಮೈದಾನದ ಟಿಡಿಆರ್‌ ವಿವಾದ ಸಂಬಂಧ ಸುಪ್ರೀಂ ದ್ವಿಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಪುನರ್‌ ಪರಿಶೀಲನಾ ಅರ್ಜಿಯನ್ನು ತ್ರಿಸದಸ್ಯ ಪೀಠ ಆಗಸ್ಟ್‌ 18 ರಂದು ವಿಚಾರಣೆ ನಡೆಸಲಿದೆ.

ಬೆಂಗಳೂರು ಅರಮನೆ ಮೈದಾನದ 15.36 ಎಕರೆಗೆ ರೂ 3,400 ಕೋಟಿಯ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್)‌ ಪ್ರಮಾಣಪತ್ರಗಳನ್ನು ಮೈಸೂರಿನ ರಾಜವಂಶಸ್ಥರಿಗೆ ಹಸ್ತಾಂತರಿಸುವಂತೆ ಸುಪ್ರೀಂ ದ್ವಿಸದಸ್ಯ ಪೀಠ ತೀರ್ಪು ನೀಡಿದ್ದು, ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಇತ್ತೀಚೆಗೆ ತ್ರಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಅಲ್ಲಿ ದ್ವಿಸದಸ್ಯ ಪೀಠದ ಆದೇಶವನ್ನು ತ್ರಿಸದಸ್ಯ ಪೀಠ ಅಮಾನತುಗೊಳಿಸಿ, ಮುಖ್ಯ ಸಿವಿಲ್‌ ಮೇಲ್ಮನವಿ ವಿಚಾರಣೆಯು ಆಗಸ್ಟ್‌ 18 ರಂದು ನಡೆಸುವುದಾಗಿ ಪೀಠ ತಿಳಿಸಿತ್ತು.

Tags:
error: Content is protected !!