ಮೈಸೂರು: ಕರ್ನಾಟಕದ 10 ಸಾಧಕರಿಗೆ 2024 ನೇ ಸಾಲಿನ ಪದ್ಮ ಪ್ರಶಸ್ತಿ ಲಭಿಸಿದ್ದು, ಈ ಪೈಕಿ 9 ಸಾಧಕರಿಗೆ ಪದ್ಮಶ್ರೀ ಮತ್ತು ಒಬ್ಬರಿಗೆ ಪದ್ಮಭೂಷಣ ಪ್ರಶಸ್ತಿ ದೊರಕಿದೆ. ವೀರ ಮರಣ ಹೊಂದಿದ ಕರ್ನಾಟಕ ಯೋಧ ಪ್ರಾಂಜಲ್‌ಗೆ ಶೌರ್ಯಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮೈಸೂರಿನ ಗಿರಿಜನ ಕಲ್ಯಾಣ ಕಾರ್ಯಕರ್ತ ಸೋಮಣ್ಣ ಸೇರಿದಂತೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ ಶ್ರೀಧರ್ ಮಾಕಂ ಕೃಷ್ಣಮೂರ್ತಿ, ಸಾಮಾಜಿಕ ಕಾರ್ಯಕರ್ತ ಕೆ.ಎಸ್ ರಾಜಣ್ಣ ಮತ್ತು ಕೊಡಗು ಮೂಲದ ಬ್ಯಾಡ್ಮಿಂಟನ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಅವರಿಗೆ ಪ್ರಶಸ್ತಿ ದೊರಕಿದೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ.
ಸೋಮಣ್ಣ- ಮೈಸೂರಿನ ಗಿರಿಜನ ಕಲ್ಯಾಣ ಕಾರ್ಯಕರ್ತ
ಪ್ರೇಮಾ ಧನರಾಜ್ – ಪ್ಲಾಸ್ಟಿಕ್ ಸರ್ಜನ್ ಮತ್ತು ಸಾಮಾಜಿಕ ಕಾರ್ಯಕರ್ತೆ
ರೋಹನ್ ಬೋಪಣ್ಣ – ಕ್ರೀಡೆ
ಅನುಪಮಾ ಹೊಸಕೆರೆ – ಕಲೆ
ಶ್ರೀಧರ್ ಮಾಕಂ ಕೃಷ್ಣಮೂರ್ತಿ- ಸಾಹಿತ್ಯ ಮತ್ತು ಶಿಕ್ಷಣ
ಕೆಎಸ್ ರಾಜಣ್ಣ- ಸಾಮಾಜಿಕ ಕಾರ್ಯಕರ್ತ
ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್ – ಮೆಡಿಸಿನ್
ಶಶಿ ಸೋನಿ- ಟ್ರೇಡ್ ಮತ್ತು ಇಂಡಸ್ಟ್ರಿ
ಜೋಶ್ನಾ ಚಿನ್ನಪ್ಪ- ಬ್ಯಾಡ್ಮಿಂಟನ್ ಆಟಗಾರ್ತಿ

ಪದ್ಮಭೂಷಣ ಪ್ರಶಸ್ತಿ ಪಡೆದವರು
ಸೀತಾರಾಮ್ ಜಿಂದಾಲ್- ಟ್ರೇಡ್ ಮತ್ತು ಇಂಡಸ್ಟ್ರಿ- ಕರ್ನಾಟಕ





