Mysore
28
scattered clouds

Social Media

ಭಾನುವಾರ, 25 ಜನವರಿ 2026
Light
Dark

ಅತ್ಯುತ್ತಮ ಸೇವೆ : ರಾಜ್ಯದ 22 ಮಂದಿ ಪೊಲೀಸರು ರಾಷ್ಟ್ರಪತಿ ಪದಕಕ್ಕೆ ಭಾಜನ

ಬೆಂಗಳೂರು : ಪ್ರತಿವರ್ಷ ಗಣರಾಜ್ಯೋತ್ಸವ ದಿನದಂದು ಪೊಲೀಸರಿಗೆ ತಾವು ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಕೊಡಮಾಡುವ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದ್ದು, ರಾಜ್ಯದ 22 ಮಂದಿ ಪೊಲೀಸ್‌‍ ಅಧಿಕಾರಿ ಮತ್ತು ಸಿಬ್ಬಂದಿ ಭಾಜನರಾಗಿದ್ದಾರೆ.

22 ಮಂದಿ ಪೊಲೀಸರ ಪೈಕಿ ಇಬ್ಬರು ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕಕ್ಕೆ ಹಾಗೂ 20 ಮಂದಿ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿರುತ್ತಾರೆ.

ವಿಶಿಷ್ಟ ಸೇವಾ ಪದಕ ಪುರಸ್ಕೃತರು:
ಎಡಿಜಿಪಿ ದೇವಜ್ಯೋತಿ ರೇ ಹಾಗೂ ಹಲಸೂರು ಉಪವಿಭಾಗದ ಎಸಿಪಿ ರಂಗಪ್ಪ ಅವರಿಗೆ ಲಭಿಸಿದೆ.

ಶ್ಲಾಘನೀಯ ಸೇವಾ ಪದಕ ಪುರಸ್ಕೃತರು:
ಬೆಳಗಾವಿ ಐಜಿಪಿ ಡಾ.ಚೇತನ್‌ಸಿಂಗ್‌ ರಾಥೋಡ್‌, ಮಂಗಳೂರು ಐಜಿಪಿ ಅಮಿತ್‌ ಸಿಂಗ್‌, ಮೈಸೂರು ನಗರ ಪೊಲೀಸ್‌‍ ಆಯುಕ್ತ ಸೀಮಾ ಲಾಟ್ಕರ್‌, ಗೃಹ ರಕ್ಷಕ ದಳದ ಡಿಐಜಿಪಿ ಸವಿತಾ, ಕಲಬುರಗಿ ಡಿಐಜಿಪಿ ಪುಟ್ಟಮಾದಯ್ಯ.

ಬಳ್ಳಾರಿ ಜಿಲ್ಲೆ ಅಡಿಷನಲ್‌ ಎಸ್‌‍ಪಿ-2 ನವೀನ್‌ಕುಮಾರ್‌, ಬೆಂಗಳೂರು ನಗರ ಅಪರಾಧ-2 ಡಿಸಿಪಿ ರಾಜ ಇಮಾಮ್‌ ಖಾಸಿಂ, ಮಂಗಳೂರು ಡಿಸಿಆರ್‌ಇ ಪೊಲೀಸ್‌‍ ಅಧೀಕ್ಷಕರು ಸೈಮನ್‌, ಬೀದರ್‌ ಲೋಕಾಯುಕ್ತ ಡಿವೈಎಸ್‌‍ಪಿ ಹನುಮಂತರಾಯ.

ಮಡಿವಾಳ ಪೊಲೀಸ್‌‍ ಠಾಣೆ ಇನ್‌ಸಪೆಕ್ಟರ್‌ ಮಹಮದ್‌, ವಿದ್ಯಾರಣ್ಯಪುರ ಪೊಲೀಸ್‌‍ ಇನ್‌ಸಪೆಕ್ಟರ್‌ ಶಿವಸ್ವಾಮಿ, ಹುಬ್ಬಳ್ಳಿ-ಧಾರವಾಡ ನಗರ ವಿದ್ಯಾಗಿರಿ ಠಾಣೆ ಇನ್‌ಸಪೆಕ್ಟರ್‌ ಮಹಮದ್‌ ರಫೀಕ್‌ ಎಂ.ತಹಸೀಲ್ದಾರ್‌, ಬೆಳಗಾವಿ ಜಿಲ್ಲೆ ಮೂಡಲಗಿ ಸರ್ಕಲ್‌ ಇನ್‌ಸಪೆಕ್ಟರ್‌ ಶ್ರೀಶೈಲ್‌ ಕೆ.ಬ್ಯಾಕೋಡ್‌, ಕೆಎಸ್‌‍ಆರ್‌ಪಿ 9ನೆ ಪಡೆಯ ಸ್ಪೆಆರ್‌ಎಸ್‌‍ಐ ಕಾಶಿನಾಥ್‌. ಮಲ್ಪೆ ಪೊಲೀಸ್‌‍ ಠಾಣೆ ಪಿಎಸ್‌‍ಐ ವೈಲೆಟ್‌ ಫೆಮಿನ್‌, ಶಿವಮೊಗ್ಗ ಪಿಎಸ್‌‍ಐ ಶಕುಂತಲಾ, ಬೆಂಗಳೂರು ನಗರ ಸಂಚಾರ ಎಎಸ್‌‍ಐ ಹರ್ಷ ನಾಗರಾಜ್‌, ಹುಳಿಮಾವು ಪೊಲೀಸ್‌‍ ಠಾಣೆ ಎಎಸ್‌‍ಐ ಸಿದ್ದರಾಜು, ಕೆಎಸ್‌‍ಆರ್‌ಪಿ ಸ್ಪೆ ಆರ್‌ಎಚ್‌ಸಿ 3ನೆ ಪಡೆಯ ದೊಡ್ಡ ಈರಪ್ಪ ಹಾಗೂ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಹೆಡ್‌ಕಾನ್‌ಸ್ಟೆಬಲ್‌ ಬಸವರಾಜ್‌ ಮ್ಯಾಗೇರಿ ಅವರು ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

Tags:
error: Content is protected !!