ಬೆಂಗಳೂರು: ಹಳ್ಳಿಗಳಲ್ಲಿ ಗೃಹ ಬಳಕೆಯವರಿಗೆ 45 ದಿನಕ್ಕೆ ಒಂದು ಸಿಲಿಂಡರ್ ಪೂರೈಕೆ ಮಾಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಮುನಿಯಪ್ಪ ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 20% ಅಡುಗೆ ಅನಿಲ ಹೋಟೆಲ್‌ಗೆ ಕೊಡುತ್ತಿದ್ದೇವೆ. ಆಸ್ಪತ್ರೆಗಳಿಗೆ 100% ಕೊಡುತ್ತಿದ್ದೇವೆ. ಮಂಗಳವಾರ ಇಂಪ್ಲಿಮೆಂಟ್ ಆದರೆ ಹೋಟೆಲ್‌ಗಳಿಗೆ ಇನ್ನೂ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಸಾಧ್ಯವಾದಷ್ಟು ಹೋಟೆಲ್‌ಗಳಿಗೆ ಹೆಚ್ಚುವರಿ ಸಿಲಿಂಡರ್ ಕೊಡೋಕೆ ಹೇಳಿದ್ದೇವೆ. ಮಂಗಳವಾರ ಮತ್ತೊಂದು ಸುತ್ತಿನ ಸಭೆಯಿದೆ. ಆ ದಿನ ಇನ್ನೂ ಹೆಚ್ಚುವರಿ ಸಿಲಿಂಡರ್ ಕೊಡುವ ಬಗ್ಗೆ ನಿರ್ಧಾರ ಮಾಡುತ್ತೇವೆ. ವಿನಾಃಕಾರಣ ಜನ ಆತಂಕಕ್ಕೆ ಒಳಗಾಗೋದು ಬೇಡ. ನಗರದಲ್ಲಿ 25 ದಿನಕ್ಕೆ ಒಂದು ಸಿಲಿಂಡರ್ ಕೊಡುತ್ತಿದ್ದೇವೆ. ಹಳ್ಳಿಗಳಲ್ಲಿ 45 ದಿನಕ್ಕೆ 1 ಸಿಲಿಂಡರ್ ಕೊಡುತ್ತಿದ್ದೇವೆ ಎಂದು ಹೇಳಿದರು.





