ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮೆರಿಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಇಂದು ರಾಜ್ಯದತ್ತ ಪ್ರಯಾಣ ಬೆಳೆಸಿದ್ದಾರೆ.
ಪ್ರಜ್ವಲ್ ರೇವಣ್ಣ ಇಂದು ಜರ್ಮನಿಯ ಮ್ಯೂನಿಕ್‌ನಿಂದ ವಿಮಾನ ಹತ್ತಿದ್ದು, LH764 ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ಪ್ರಯಾಣಿಕರ ಸೀಟ್‌ನಲ್ಲಿ ಕುಳಿತುಕೊಂಡಿದ್ದಾರೆ. ಇಂದು ಸಂಜೆ 4;30 ಕ್ಕೆ ವಿಮಾನ
ಟೇಕಾಫ್ ಆಗಿದೆ. ಮೊದಲಿಗೆ ಲಗೇಜ್ ಚೆಕ್‌ಇನ್ ಮಾಡಿ, ನಂತರ ಎರಡು ಲಗ್ಗೇಜ್ ಬ್ಯಾಗ್ ಸಮೇತ ಇಂದು ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ಗೆ ಮಧ್ಯರಾತ್ರಿ 12;30ಕ್ಕೆ ಆಗಮಿಸಲಿದ್ದಾರೆ.
ಈ ಹಿಂದೆ ಎರಡು ಬಾರಿ ಬರುವುದಾಗಿ ಹೇಳಿ ಕೊನೆ ಸಮಯದಲ್ಲಿ ವಿಮಾನ ಹತ್ತದೆ ಕಣ್ಣಮುಚ್ಚಾಲೆ ಆಟವಾಡುತ್ತಿದ್ದ ಪ್ರಜ್ವಲ್ ಕೊನೆಗೆ ಮೇ 31 ರಂದು ಎಸ್‌ಐಟಿ ಮುಂದೆ ಹಾಜರಾಗ್ತಾತೆ ಎಂದು ವಿಡಿಯೋ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಜರ್ಮನಿಯಿಂದ ಬೆಂಗಳೂರಿಗೆ ಬರಲು ಟಿಕೆಟ್ ಬುಕ್ ಮಾಡಲಾಗಿತ್ತು. ಲುಫ್ತಾರ್ ಏರ್‌ಲೈನ್ಸ್ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ಸೀಟಿನಲ್ಲಿ ಬೆಂಗಳೂರಿನತ್ತ ಹೊರಟಿದ್ದಾರೆ.
ಇನ್ನೂ ಪ್ರಜ್ವಲ್ ಅರೆಸ್ಟ್ ಆಗುವುದು ಕನ್ಫರ್ಮ್ ಆಗುತ್ತಿದ್ದಂತೆ ವಿದೇಶದಲ್ಲಿದ್ದುಕೊಂಡೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಅರ್ಜಿಯನ್ನು ಮೇ. 31 ಕ್ಕೆ ಮುಂದೂಡಿ ಆದೇಶ ಹೊರಡಿಸಿತ್ತು. ಈ ಮೂಲಕ ಪ್ರಜ್ವಲ್ ಬಂಧನ ಫಿಕ್ಸ್ ಆಗಿದ್ದು, ಎಸ್‌ಐಟಿ ತಂಡ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಬೀಡು ಬಿಟ್ಟಿದೆ.